ವಿಶ್ವ ಶೌಚಾಲಯ ದಿನ ( WTD ) ಜಾಗತಿಕ ನೈರ್ಮಲ್ಯ ಬಿಕ್ಕಟ್ಟನ್ನು ನಿಭಾಯಿಸಲು ಕ್ರಮವನ್ನು ಪ್ರೇರೇಪಿಸಲು ನವೆಂಬರ್ 19 ರಂದು ಅಧಿಕೃತ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಆಚರಣೆ ದಿನವಾಗಿದೆ .
ಪ್ರತಿವರ್ಷ ನವೆಂಬರ 19 ರಂದು ಜಾಗತಿಕ ಮಟ್ಟದಲ್ಲಿ ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ. ಇದು ಜಾಗತಿಕ ನೈರ್ಮಲ್ಯ ಬಿಕ್ಕಟ್ಟನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಮಹತ್ವದ ಜಾಗತಿಕ ಉಪಕ್ರಮವಾಗಿದೆ.
19 ನವೆಂಬರ್ 2001 ರಂದು, NGO ವರ್ಲ್ಡ್ ಟಾಯ್ಲೆಟ್ ಆರ್ಗನೈಸೇಶನ್ WTO) ಅನ್ನು ಸಿಂಗಾಪುರದ ಲೋಕೋಪಕಾರಿ ಜ್ಯಾಕ್ ಸಿಮ್ ಸ್ಥಾಪಿಸಿದರು . ನಂತರ ಅವರು ನವೆಂಬರ್ 19 ಅನ್ನು ವಿಶ್ವ ಶೌಚಾಲಯ ದಿನ ಎಂದು ಘೋಷಿಸಿದರು.
ಶೌಚಾಲಯ ಬಳಕೆಯಿಂದ ಆಗುವ ಉಪಯೋಗಗಳು
01) ಬಯಲು ಶೌಚದ ಅಪಾಯಗಳಾದ ಕ್ರಿಮಿಕೀಟ, ಸರಿಸೃಪಗಳಿಂದ ರಕ್ಷಣೆ
02) ಬಯಲು ಶೌಚಮುಕ್ತ ಸ್ವಚ್ಛ ಪರಿಸರ ನಿರ್ಮಾಣ
03) ವಯೋವೃದ್ಧರು, ಮಹಿಳೆಯರು, ಮಕ್ಕಳ ಘನತೆ, ಆರೋಗ್ಯ ರಕ್ಷಣೆ
04) ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟುವಿಕೆ ಸಾಧ್ಯ