ತುಮಕೂರು: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಬಳಿ ಕೆರೆಯಲ್ಲಿ ಬಿದ್ದು ತಂದೆ, ಮಗಳು ಸಾವನ್ನಪ್ಪಿದ್ದಾರೆ.
ಕಾಲು ಜಾರಿ ಮಗಳ ರಕ್ಷಣೆಗೆ ತೆರಳಿದ್ದ ತಂದೆಯೂ ಸಾವು ಕಂಡಿದ್ದಾರೆ. ತಂದೆ ಫಿರ್ದೋಸ್(45), 6 ವರ್ಷದ ಪುತ್ರಿ ಆಯಿಮಾ ಮೃತಪಟ್ಟಿದ್ದಾರೆ. ಬೆಂಗಳೂರಿನ ಶಿವಾಜಿನಗರದಿಂದ ಸಂಬಂಧಿಕರ ಮನೆಗೆ ಬಂದಿದ್ದ ಅವರು ಕೆರೆ ನೋಡಲು ಹೋಗಿದ್ದ ವೇಳೆ ದುರಂತ ಸಂಭವಿಸಿದೆ. ಮಗಳು ಕೆರೆಯಲ್ಲಿ ಕಾಲು ಜಾರಿ ಬಿದ್ದಿದ್ದು, ಮಗಳ ರಕ್ಷಣೆಗೆ ಇಳಿದ ತಂದೆಯೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಕೊರಟಗೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.