HomeBusinessBIG NEWS: ವಿದೇಶದಲ್ಲಿ ಹೊಂದಿರುವ ಸ್ವತ್ತು, ಆದಾಯದ ಬಗ್ಗೆ ಘೋಷಿಸದಿದ್ದರೆ 10 ಲಕ್ಷ ರೂ. ದಂಡ

BIG NEWS: ವಿದೇಶದಲ್ಲಿ ಹೊಂದಿರುವ ಸ್ವತ್ತು, ಆದಾಯದ ಬಗ್ಗೆ ಘೋಷಿಸದಿದ್ದರೆ 10 ಲಕ್ಷ ರೂ. ದಂಡ

ನವದೆಹಲಿ: ತೆರಿಗೆ ಪಾವತಿದಾರರು ವಿದೇಶದಲ್ಲಿ ಹೊಂದಿರುವ ಸ್ವತ್ತುಗಳು ಮತ್ತು ಆದಾಯದ ಬಗ್ಗೆ ಘೋಷಿಸಲು ವಿಫಲವಾದಲ್ಲಿ ಅಂತವರಿಗೆ ಕಪ್ಪು ಹಣ ತಡೆ ಕಾಯ್ದೆಯಡಿ 10 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

2024- 25 ನೇ ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸಲಾದ ಐಟಿಆರ್ ಗಳಲ್ಲಿ ವಿದೇಶಿ ಸ್ವತ್ತು ಅಥವಾ ಆದಾಯದ ಕುರಿತಾಗಿ ಘೋಷಣೆ ಮಾಡದಿರುವ ತೆರಿಗೆದಾರರಿಗೆ ಸಂದೇಶ ಕಳಿಸಲು ಅಭಿಯಾನ ಆರಂಭಿಸಲಾಗಿದೆ. ಇದರ ಭಾಗವಾಗಿ ಆದಾಯ ತೆರಿಗೆ ಇಲಾಖೆ ಸಾರ್ವಜನಿಕರಿಗೆ ತಿಳಿವಳಿಕೆ ಮಾಹಿತಿಯನ್ನು ಪ್ರಕಟಿಸಿದೆ.

ವಿದೇಶದಲ್ಲಿ ಬ್ಯಾಂಕ್ ಖಾತೆ, ವಿಮೆ ಒಪ್ಪಂದ, ಕಂಪನಿ ಅಥವಾ ವ್ಯವಹಾರದಲ್ಲಿನ ಬಡ್ಡಿಮ ಸ್ಥಿರಾಸ್ತಿ, ಕಸ್ಟೊಡಿಯಲ್ ಖಾತೆ, ಟ್ರಸ್ಟಿ, ಷೇರು, ಸಾಲ ಪತ್ರಕ್ಕೆ ಲಭಿಸಿದ ಬಡ್ಡಿ ಮೊದಲಾದವುಗಳನ್ನು ವಿದೇಶಿ ಸ್ವತ್ತು ಎಂದು ಪರಿಗಣಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2024- 25 ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ವಿಳಂಬ ಮತ್ತು ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ದಿನವಾಗಿದೆ. ವಿದೇಶಿ ಆದಾಯ ಘೋಷಿಸದ ತೆರಿಗೆದಾರರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular