ಮಂಗಳೂರು : ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ ಘಟನೆ ಉಚ್ಚಿಲ ಬಳಿ ನಡೆದಿದೆ.
ಖಾಸಗಿ ಬೀಚ್ ರೆಸಾರ್ಟ್’ ನಲ್ಲಿ ಈ ಘಟನೆ ನಡೆದಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಮೈಸೂರು ಮೂಲದ ಯುವತಿಯರಾಗಿದ್ದು, ಮೃತರನ್ನು ನಿಶಾ (21) ಪಾರ್ವತಿ(20) ಕೀರ್ತನಾ(21) ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರು ಮೂಲದ ಯುವತಿಯರು ಟ್ರಿಪ್ ಗೆಂದು ಮಂಗಳೂರಿಗೆ ಬಂದಿದ್ದರು. ಇಂದು ರೆಸಾರ್ಟ್ ನಲ್ಲಿ ಈಜಲೆಂದು ಸ್ವಿಮ್ಮಿಂಗ್ ಫೂಲ್ ಗೆ ಇಳಿದಾಗ ಈ ಘಟನೆ ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.