ಬಳ್ಳಾರಿ: ಬಳ್ಳಾರಿ ಜಿಲ್ಲಾಸ್ಪತ್ರೆ ವಿಮ್ಸ್ ನಲ್ಲಿ ಮೂವರು ಬಾಣಂತಿಯರು ಮೃತಪಟ್ಟಿದ್ದು, ಅಲ್ಲಿನ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸಮಸ್ಯೆ ಆಲಿಸುತ್ತಿಲ್ಲ.
ವಿಮ್ಸ್ ನಲ್ಲಿ ಮೂವರು ಬಾಣಂತಿಯರು ಸಾವನ್ನಪ್ಪಿ ನಾಲ್ಕು ದಿನಗಳು ಕಳೆದಿವೆ ಆದರೂ ಸಚಿವ ಜಮೀರ್ ಅಹ್ಮದ್ ಅತ್ತ ತಿರುಗಿಯೂ ನೋಡಿಲ್ಲ. ಜನರ ಸನಸ್ಯೆಯನ್ನೂ ಆಲಿಸಿಲ್ಲ. ಸಚಿವರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಬಾಣಂತಿಯರು ಮೆಡಿಸಿನ್ ರಿಯಾಕ್ಷನ್ ಆಗಿ ತೀವ್ರ ಅಸ್ವಸ್ಥಗೊಂಡಿದ್ದರು. ನ.10ರಂದು ಸಿಜೇರಿಯನ್ ಬಳಿಕ ಲಲಿತಮ್ಮ, ನಂದಿನಿ ಎಂಬುವವರು ಮೃತಪಟ್ಟಿದ್ದರು. ನ.13ರಂದು ಬಾಣಂತಿ ರೋಜಮ್ಮ ಮೃತಪಟ್ಟಿದ್ದರು. ಇನ್ನು ನಾಲ್ವರು ಬಾಣಂತಿಯರಿಗೆ ವಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟೆಲ್ಲ ಅವಘಡ ಸಂಭವಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಮಾತ್ರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿಲ್ಲ.