ಮನೆಗೆ ನುಗ್ಗಿ ವೃದ್ಧೆ ಸರ ದೋಚಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಮನೆಗೆ ನುಗ್ಗಿ ವೃದ್ಧೆಯ ಚಿನ್ನದ ಸರ ದೋಚಿದ್ದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಕನಕಪುರದ ನವೀನ್(34) ಎಂಬವನನ್ನು ಬಂಧಿಸಿ 85 ಸಾವಿರ ರೂ. ಬೆಲೆ ಬಾಳುವ ಚಿನ್ನದ ಸರ. ಮೂರು ಲಕ್ಷ ರೂಪಾಯಿ ಮೌಲ್ಯದ 5 ಬೈಕುಗಳನ್ನು ಜಪ್ತಿ ಮಾಡಿದ್ದಾರೆ.

ಅಕ್ಟೋಬರ್ 11ರಂದು ಸಿಡೇದಹಳ್ಳಿಯಲ್ಲಿ ಚಿನ್ನದ ಸರ ಕಳವು ಮಾಡಿದ್ದ. ಮನೆಯಲ್ಲಿ ವೃದ್ದೆ ಮುನ್ನಮ್ಮ ಮಲಗಿದ್ದ ಸಂದರ್ಭದಲ್ಲಿ ನವೀನ್ ಚಿನ್ನದ ಸರ ಕಳವು ಮಾಡಿದ್ದು, ಬನಶಂಕರಿಯ ಮಣಪ್ಪುರಂ ಫೈನಾನ್ಸ್ ನಲ್ಲಿ ಚಿನ್ನದ ಸರವನ್ನು ಒತ್ತೆ ಇಟ್ಟಿದ್ದ. ಬಾಗಲಗುಂಟೆ, ವಿಜಯನಗರ. ಕೋರಮಂಗಲ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದ ನವೀನನನ್ನು ಬಂಧಿಸಲಾಗಿದೆ. ಸರಕಳವು ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read