ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರಿತ ಸಾಲದ(MCLR) ಮೇಲಿನ ಬಡ್ಡಿ ದರವನ್ನು ಶೇಕಡ 0.05 ರಷ್ಟು ಹೆಚ್ಚಳ ಮಾಡಿದೆ.
ಶುಕ್ರವಾರದಿಂದಲೇ ಪರಿಷ್ಕೃತ ಬಡ್ಡಿ ದರದ ಆದೇಶ ಜಾರಿಗೆ ಬರಲಿದೆ. ಒಂದು ವರ್ಷದ ಎಂಸಿಎಲ್ಆರ್ ಬಡ್ಡಿ ದರವನ್ನು ಶೇಕಡ 9ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ದೀರ್ಘಾವಧಿಯ ಗೃಹ ಸಾಲದ ಮೇಲಿನ ಇಎಂಐ ಏರಿಕೆಯಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ಸಾಲದ ಪ್ರಮಾಣದಲ್ಲಿ ಶೇ. 42ರಷ್ಟು ಎಂಸಿಎಲ್ಆರ್ ಬಡ್ಡಿದರದೊಂದಿಗೆ ಸಂಯೋಜಿಸಲ್ಪಟ್ಟ ಸಾಲಗಳಾಗಿವೆ. ಬಡ್ಡಿ ದರ ಹೆಚ್ಚಳದಿಂದ ಸಾಲಗಾರರಿಗೆ ಹೊರೆಯಾಗಲಿದೆ.