ಉಪಚುನಾವಣೆ: ಅಮೆರಿಕಾದಿಂದ ಶಿಗ್ಗಾಂವಿಗೆ ಆಗಮಿಸಿ ಮತಚಲಾಯಿಸಿದ ಯುವತಿ

ಶಿಗ್ಗಾಂವಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನಿಂದ ಉಪಚುನಾವಣಾ ಮತದಾನ ಸಾಗುತ್ತಿದೆ.

ಶಿಗ್ಗಂವಿ, ಚನ್ನಪಟಣ, ಸಂಡೂರು ಕ್ಷೇತ್ರಗಳಲ್ಲಿ ಮತದಾರರು ಅತ್ಯುತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ವಯೋವೃದ್ಧರು ವ್ಹೀಲ್ ಚೇರ್ ನಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುತ್ತಿದ್ದರೆ, ಬಾಣಂತಿಯರು ಹಸುಗೂಸನ್ನು ಕೈಯಲ್ಲಿ ಎತ್ತಿಕೊಂಡು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ.

ಈ ನಡುವೆ ಶಿಗ್ಗಾಂವಿಯಲ್ಲಿ ದೂರದ ಅಮೆರಿಕಾದಿಂದ ಆಗಮಿಸಿ ಯುವತಿ ಮತದಾನ ಮಾಡಿದ್ದಾರೆ. ಯುಎಸ್ ನಿಂದ ಆಗಮಿಸಿರುವ ಅನುಷಾ ಎಂಬ ಯುವತಿ ತನ್ನ ತಾಯಿ ಜೊತೆ ಶಿಗ್ಗಾಂವಿಯ ಮಮ್ಲೆದೇಸಾಯಿ ಶಾಲೆಯ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ನಾಯಕತ್ವದ ಗುಣವಿರುವ, ಅಭಿವೃದ್ಧಿ ಕೆಲಸಗಳನ್ನು ಮಾಡುವ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಡುವುದು ನಮ್ಮೆಲ್ಲರ ಕರ್ತವ್ಯ. ಅಮೆರಿಕಾದ ಟೆಕ್ಸಾಸ್ ನಲ್ಲಿರುವ ನನಗೆ ಶಿಗ್ಗಾಂವಿಗೆ ಬಂದಾಗ ಉಪಚುನವಣೆಯಲ್ಲಿ ಮತದಾನ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಅನುಷಾ ಸಂತಸ ಹಂಚಿಕೊಂಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read