ರಾಂಚಿ: ಯಾರೇ ಅಡ್ಡಬಂದರೂ ವಕ್ಪ್ ಕಾನೂನಿಗೆ ತಿದ್ದುಪಡಿ ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಾರ್ಖಂಡ್ ಬಾಗ್ಮಾರಾದಲ್ಲಿ ಮಂಗಳವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ದೇವಾಲಯಗಳ ಜಮೀನು, ಜಾಗ, ರೈತರ ಜಮೀನು, ಇತರರಿಗೆ ಸೇರಿದ ಭೂಮಿಯನ್ನು ವಕ್ಪ್ ಮಂಡಳಿ ಕಬಳಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕಾಯ್ದೆಗೆ ತಿದ್ದುಪಡಿ ತರುವ ತುರ್ತು ಅಗತ್ಯವಿದೆ ಎಂದು ಹೇಳಿದ್ದಾರೆ.
ಯಾರೇ ಅಡ್ಡ ಬಂದರೂ ಉದ್ದೇಶಿತ ವಕ್ಪ್ ಕಾನೂನಿನ ತಿದ್ದುಪಡಿ ತಡೆಯಲು ಸಾಧ್ಯವಿಲ್ಲ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ಕುರಿತಾದ ತಿದ್ದುಪಡಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಕಾನೂನಿನಲ್ಲಿ ಕೆಲವೊಂದು ಬದಲಾವಣೆ ಮಾಡಲಾಗುವುದು. ಮುಂದಿನ ಅಧಿವೇಶನದಲ್ಲಿಯೇ ತಿದ್ದುಪಡಿ ವಿಧೇಯಕ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.