ಇಬ್ಬರೂ ರಾಜೀನಾಮೆ ಕೊಟ್ಟು ಯಶವಂತಪುರದಲ್ಲಿ ಸ್ಪರ್ಧಿಸೋಣ ಆಗ ಯಾರ ತಾಕತ್ತು ಎಷ್ಟು ಗೊತ್ತಾಗುತ್ತೆ: ಶೋಭಾ ಕರಂದ್ಲಾಜೆಗೆ ಸವಾಲು ಹಾಕಿದ ಸೋಮಶೇಖರ್

ಬೆಂಗಳೂರು: ಸ್ವಪಕ್ಷದ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಕಿಡಿಕಾರಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಎಸ್.ಟಿ.ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಶೋಭಾ ಕರಂದ್ಲಾಜೆಗೆ ನನ್ನ ತಾಕತ್ತಿನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ತಾಕತ್ತು ನೋಡಬೇಕೆಂದರೆ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ನಾನೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಇಬ್ಬರೂ ಯಶವಂತಪುರದಿಂದ ಸ್ಪರ್ಧೆ ಮಾಡೋನ ಆಗ ಯಾರ ತಾಕತ್ತು ಎಷ್ಟು ಎಂಬುದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದ್ದಾರೆ.

ಶೋಭಾ ಕರಂದ್ಲಾಜೆ ಮುಖ ನೋದಿ ಯಾರೂ ಮತ ಹಾಕಿಲ್ಲ. ಸಂಸದರಾಗಿ, ಕೇಂದ್ರ ಸಚಿವರಾಗಿ ಅವರು ಮಾಡಿದ್ದು ಏನು? ಚಿಕ್ಕಮಗಳೂರಿನಲ್ಲ್ ಜನರು ಉಗುಳಿದ್ದಕ್ಕೆ ಯಶವಂತಪುರಕ್ಕೆ ಬಂದಿದ್ದಾರೆ. ನಾನು ಅವರ ಹಾಗೆ ಕ್ಷೇತ್ರ ಬಿಟ್ಟು ಬೇರೊಂದು ಕ್ಷೇತ್ರಕ್ಕೆ ಓಡಿಹೋಗಿ ನಿಲ್ಲಲ್ಲ ಎಂದು ವಾಗ್ದಾಳಿ ನಡೆಸಿದರು.

ಸುಮ್ಮನೆ ಅವರ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದಿಂದ ಆಗಬೇಕಿರುವ ಕೆಲಸವೇನು ಅದನ್ನು ಮಾಡಲಿ. ಕೇಂದ್ರ ಸರ್ಕಾರದಿಂದ ಯೋಜನೆಗಳನ್ನು ತರಿಸಲಿ. ಅದನ್ನು ಬಿಟ್ಟು ಅನಗತ್ಯವಾಗಿ ಟೀಕಿಸುವುದು ಬೇಡ ಎಂದು ಗುಡುಗಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read