ಕೇಸರಿ ಬಟ್ಟೆ ಧರಿಸಿ ಮೂವರು ಭಿಕ್ಷೆ ಬೇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವರು, ಅವರು ಹಿಂದೂ ಸಾಧುಗಳಲ್ಲ, ಮುಸ್ಲಿಮರು ಎಂದು ಆರೋಪಿಸಿ ಮೂವರ ಜತೆ ವಾಗ್ವಾದ ನಡೆಸಿದ್ದಾರೆ.
ಘಟನೆ ಗುಜರಾತಿನ ಸೂರತ್ ನಲ್ಲಿ ನಡೆದಿದ್ದು, ಸಾರ್ವಜನಿಕರೊಂದಿಗಿನ ಮಾತುಕತೆ ಸಂದರ್ಭದಲ್ಲಿ ಈ ಮೂವರಿಗೆ ಹಿಂದೂ ದೇವರುಗಳನ್ನು ಸರಿಯಾಗಿ ಹೆಸರಿಸಲು ಆಗಲಿಲ್ಲ ಮತ್ತು ಯಾವುದೇ ಧಾರ್ಮಿಕ ಗ್ರಂಥದ ಶ್ಲೋಕಗಳನ್ನು ಹೇಳಲು ಸಾಧ್ಯವಾಗಲಿಲ್ಲ.
ವೀಡಿಯೊ ಮಾಡಿದ ವ್ಯಕ್ತಿ ಶ್ಲೋಕ ಹೇಳಲು ಕೇಳಿದಾಗ, ಅವರು ಉರ್ದುವಿನಲ್ಲಿ ‘ದುವಾ’ ಮಾತನಾಡಲು ಪ್ರಾರಂಭಿಸಿದ್ದಾರೆ. ಅವರಿಗೆ ಭೋಲೆನಾಥ್ ಹೆಸರು ಮಾತ್ರ ಗೊತ್ತಿತ್ತು. ಒಬ್ಬನ ಗುರುತಿನ ಚೀಟಿಯನ್ನು ಪರಿಶೀಲಿಸಿದಾಗ ಆತನ ಹೆಸರು ಸಲ್ಮಾನ್ ಎಂದು ಬರೆದಿರುವುದು ಪತ್ತೆಯಾಗಿದೆ.
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ಕೇಸರಿ ವಸ್ತ್ರ ಧರಿಸಿ ಸಾಧುಗಳ ವೇಷದಲ್ಲಿ ತಿರುಗಾಡುತ್ತಿದ್ದ ಮೂವರು ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದರು.
Three Mu$|!m$ disguised as sadhus caught by locals in #Surat, #Gujarat
Doesn’t it corrupt their faith when Bigoted Mu$|!m$ masquerade as Hindus and don saffron robes to earn a living?#GujaratNews #GujaratPolice#Impersonation pic.twitter.com/NMSok5HZZA
— Sanatan Prabhat (@SanatanPrabhat) November 6, 2024