ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಐಷಾರಾಮಿ ಭೋಜನದಲ್ಲಿ ತೊಡಗಿದ್ದಾರೆ ಎಂದು ಹೇಳಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಸ್ವಯಂ ಘೋಷಿತ “ಆಮ್ ಆದ್ಮಿಯ ಸಂಪತ್ತಿನ ಪ್ರದರ್ಶನ” ಎಂದು ವ್ಯಂಗ್ಯವಾಡಿವೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ, ಎಂಟು ಆಸನಗಳ ಡೈನಿಂಗ್ ಟೇಬಲ್‌ನಲ್ಲಿ ತರಹೇವಾರಿ ಭಕ್ಷ್ಯಗಳ ಮುಂದೆ ಕೇಜ್ರಿವಾಲ್ ಕುಳಿತಿರುವುದನ್ನು ತೋರಿಸುತ್ತದೆ. ಅವರ ಪತ್ನಿ, ಸುನೀತಾ ಕೇಜ್ರಿವಾಲ್ರು ಸಹ ಇತರರೊಂದಿಗೆ ಕುಳಿತಿದ್ದಾರೆ.
ಸಂಪತ್ತಿನ ಪ್ರದರ್ಶನಕ್ಕಾಗಿ ಕೇಜ್ರಿವಾಲ್ ಅವರನ್ನು ದೂಷಿಸುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಸಾಮಾಜಿಕ ಮಾಧ್ಯಮ ಬಳಕೆದಾರರೊಂದಿಗೆ ಸೇರಿಕೊಂಡಿದ್ದು, ಕೆಲವರು ಅವರ ಹಿಂದಿನ “ಸಾಮಾನ್ಯ ವ್ಯಕ್ತಿ” ಚಿತ್ರಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ ಎಂದು ಗೇಲಿ ಮಾಡಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಶಹನವಾಜ್ ಹುಸೇನ್ ಅವರು ವೀಡಿಯೊಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, “ಕೇಜ್ರಿವಾಲ್ ಒಮ್ಮೆ ತಮ್ಮನ್ನು ‘ಆಮ್ ಆದ್ಮಿ’ ಎಂದು ಬಿಂಬಿಸಿಕೊಂಡರು – ಆದರೆ ಅದೆಲ್ಲವೂ ಪ್ರದರ್ಶನಕ್ಕಾಗಿ ಮಾತ್ರ” ಎಂದಿದ್ದಾರೆ
ಏತನ್ಮಧ್ಯೆ, ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಕೂಡ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ವೀಡಿಯೊವನ್ನು “ದುರದೃಷ್ಟಕರ” ಎಂದು ಬಣ್ಣಿಸಿದ್ದಾರೆ.
ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ದೀಕ್ಷಿತ್, “ಸಾಮಾನ್ಯವಾಗಿ, ಅಂತಹ ವೈಯಕ್ತಿಕ ವಿಷಯಗಳ ಬಗ್ಗೆ ಯಾರೂ ಪ್ರತಿಕ್ರಿಯಿಸುವುದಿಲ್ಲ. ಆದರೆ, ಕೇಜ್ರಿವಾಲ್ ತಮ್ಮ ಸರಳ ಜೀವನವನ್ನು ಮಾರಿಕೊಂಡ ರೀತಿ ದುರದೃಷ್ಟಕರ” ಎಂದಿದ್ದಾರೆ.
एक आम आदमी 😳 pic.twitter.com/5AT5027RLc
— BJP Delhi (@BJP4Delhi) November 5, 2024