ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ತಮ್ಮ ಎದುರಾಳಿ ಕಮಲಾ ಹ್ಯಾರಿಸ್ ಅವರನ್ನು ಮಣಿಸಿ ಎರಡನೇ ಬಾರಿಗೆ ಪುನಾರಾಯ್ಕೆಯಾಗಿದ್ದಾರೆ. ಇದರ ಮಧ್ಯೆ ಯುವತಿಯೊಬ್ಬರು ಮತದಾನವನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಳ್ಳಲು ಮುಂದಾಗಿದ್ದು, ಆನ್‌ಲೈನ್‌ನಲ್ಲಿ ಈ ಫೋಸ್ಟ್ ಚರ್ಚೆಯನ್ನು ಹುಟ್ಟುಹಾಕಿದೆ.
ರೆಡ್ಡಿಟ್ ಪೋಸ್ಟ್ ಮಾಡಿರುವ ಯುವತಿ ಫ್ಲೋರಿಡಾದಲ್ಲಿ ವಾಸಿಸುತ್ತಿದ್ದು, ಭಾವಿ ಪತಿ ಯಾವುದೇ ಅಭ್ಯರ್ಥಿಗಳನ್ನು ಇಷ್ಟಪಡದ ಕಾರಣ ಮತ ಚಲಾಯಿಸಲು ನಿರಾಕರಿಸಿದರು ಎಂದು ವಿವರಿಸಿದ್ದಾರೆ. “ನಾನು ಫ್ಲೋರಿಡಾದಲ್ಲಿ ವಾಸಿಸುವ ಯುವತಿಯಾಗಿದ್ದು ಮತ್ತು ನಮ್ಮ ಹಕ್ಕುಗಳನ್ನು ಇನ್ನಷ್ಟು ನಿರ್ಬಂಧಿಸುವ ಭವಿಷ್ಯದ ಬಗ್ಗೆ ನಾನು ಭಯಪಡುತ್ತೇನೆ” ಎಂದು ಬರೆದಿದ್ದಾರೆ.
“ನಮ್ಮ ರಾಜಕೀಯ ದೃಷ್ಟಿಕೋನಗಳು ಬಹಳ ಹೋಲುತ್ತವೆ. ಹಾಗಾಗಿ ಅವರು ಈ ಮತವನ್ನು ಬಿಟ್ಟುಬಿಡುವ ಬಗ್ಗೆ ಏಕೆ ಅಸಡ್ಡೆ ಹೊಂದಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಅವರು ಹೇಳಿದ್ದು, “ಅವನು ಮತ ಹಾಕದಿದ್ದರೆ ನಾನು ಅವನೊಂದಿಗೆ ಇರಲು ಸಾಧ್ಯವಿಲ್ಲ ಎಂದು ಹೇಳುವುದು ಕಷ್ಟಕರವಾಗಿದೆ” ಎಂದಿದ್ದಾರೆ.
“ನನ್ನ ನಿಶ್ಚಿತ ವರ , ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮತ ಹಾಕಲು ಯೋಜಿಸುತ್ತಿಲ್ಲ. ನಾನು ನೈತಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇನೆ. ನಮ್ಮ ನಿಶ್ಚಿತಾರ್ಥವನ್ನು ಇದು ನಾಟಕೀಯವಾಗಿ ಕೊನೆಗೊಳಿಸುತ್ತಿದೆಯೇ ?” ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.