ಪೀಣ್ಯ ಫ್ಲೈ ಓವರ್ ಮೇಲೆ ವಾಹನ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೂ ಟ್ರಾಫಿಕ್ ಸಮಸ್ಯೆಗೆ ಸದ್ಯಕ್ಕಿಲ್ಲ ಮುಕ್ತಿ

ಬೆಂಗಳೂರು: ಪೀಣ್ಯ ಫ್ಲೈ ಓವರ್ ಮೇಲೆ ಭಾರಿ ವಾಹನ ಸಂಚಾರಕ್ಕೆ ಅನುಮತಿ ಸಿಕ್ಕೆದೆಯಾದರೂ ಬೇರೆ ವಾಹನಗಳಿಗೆ ಟ್ರಾಫಿಕ್ ಜಾಮ್ ಸಮಸ್ಯೆಗೆಸದ್ಯಕ್ಕೆ ಮುಕ್ತಿ ಸಿಕ್ಕಿಲ್ಲ.

ಫ್ಲೈ ಓವರ್ ಮೇಲೆ ಎಲ್ಲಾ ವಾಹನ ಸಂಚರಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಫ್ಲೈ ಓವರ್ ಸರಿಯಾಗಿದೆ ಇನ್ನೇನು ಟ್ರಾಫಿಕ್ ಸಮಸ್ಯೆ ಇಲ್ಲ ಎಂದುಕೊಳ್ಳುವಂತಿಲ್ಲ. ಇನ್ನೂ 8 ತಿಂಗಳಕಾಲ ಈ ಭಗದಲ್ಲಿ ಸಂಚಾರ ದಟ್ಟಣೆ ಇರಲಿದೆ.

ಜುಲೈ 29ರಿಂದ ಪೀಣ್ಯ ಫ್ಲೈ ಓವರ್ ಮೇಲೆ ಎಲ್ಲಾ ಮಾದರಿಯ ವಾಹನ ಸಂಚಾರಕ್ಕೆ ಅವಕಾಶ ನಿಡಲಾಗಿತ್ತು. ಆದರೆ ಪ್ರತಿ ಶುಕ್ರವಾರ ಇಲ್ಲಿ ಫ್ಲೈ ಓವರ್ ಸಂಪೂರ್ಣ ಬಂದ್ ಮಾಡಬೇಕು. ವಾಹನ ಸವಾರರು ಸರ್ವಿಸ್ ರಸ್ತೆ ಬಳಸಬೇಕು ಎಂದು ಐಐ ಎಸ್ ಸಿ ತಜ್ಞರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವೀಕೆಂಡ್ ಸಂದರ್ಭದಲ್ಲಿ ಮಾತ್ರ ಸಮಸ್ಯೆಯಾಗುತ್ತಿತ್ತು. ಆದರೆ ಈಗ ಈ ಸಮಸ್ಯೆ ಇನ್ನೂ ಎಂಟು ತಿಂಗಳು ಮುಂದುವರೆಯಲಿದೆ.

ಕಾರಣ ಪಿಲ್ಲರ್ ಗಳಲ್ಲಿ ಕೇಬಲ್ ಬದಲಿಸುವ ಕಾರ್ಯ ಒಂದು ತಿಂಗಳಲ್ಲಿ ಮುಗಿಯಬೇಕಿತ್ತು. ಆದರೆ ಕೇಬಲ್ ಬದಲಿಸುವ ಕಾರ್ಯ ಇಇನ್ನೂ 8 ತಿಂಗಳವರೆಗೆ ಮುಂದುವರೆಯಲಿದೆ. ಯಾವ ಕಾರಣಕ್ಕೂ ಫ್ಲೈಓವರ್ ನಲ್ಲಿ ಮತ್ತೆ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ 1400 ಕೇಬಲ್ ಅಳವಡಿಕೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 8 ತಿಂಗಳ ಕಾಲ ಕಾಮಗಾರಿ ನಡೆಯಲಿದ್ದು, ಟ್ರಾಫಿಕ್ ಜಾಮ್ ಸಮಸ್ಯೆ ಮುಂದುವರೆಯಲಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read