ಸೋಮವಾರ ಗುರುಗ್ರಾಮ್‌ನ ಸೋಹ್ನಾ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಮೂವರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಕೆಳಗೆ ಹಾದು ಹೋಗುತ್ತಿದ್ದ ಕಾರು ಮತ್ತು ಬೈಕ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಘಟನೆಯ ಶಾಕಿಂಗ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜಿಡಿ ಗೋಯೆಂಕಾ ವಿಶ್ವವಿದ್ಯಾಲಯ ಮತ್ತು ಕೆಆರ್ ಮಂಗಳಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಅಕ್ಷಿತ್ (18) ಮತ್ತು ದಕ್ಷ್ (19) ತಮ್ಮ ಸ್ನೇಹಿತ ಧ್ರುವ ಜೊತೆಗೆ ಕಾಲೇಜಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅಲಿಪುರ ಗ್ರಾಮದ ಬಳಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಮೇಲಕ್ಕೆ ಹಾರಿ ಫ್ಲೈಓವರ್ ಪಿಲ್ಲರ್‌ಗೆ ಅಪ್ಪಳಿಸಿದೆ. ಪರಿಣಾಮ ವಾಹನದ ಮೇಲ್ಛಾವಣಿಯು ಮೇಲ್ಸೇತುವೆಯ ಕೆಳಗಿನ ಭಾಗಕ್ಕೆ ಡಿಕ್ಕಿ ಹೊಡೆದು ಕಾರು ಮತ್ತೊಂದು ವಾಹನ ಮತ್ತು ಚಲಿಸುತ್ತಿದ್ದ ಮೋಟಾರ್‌ಸೈಕಲ್ ಮೇಲೆ ಬಿದ್ದಿದೆ.
ದೆಹಲಿಯ ನಾಥುಪುರ ಮತ್ತು ಘಿಟೋರ್ನಿ ನಿವಾಸಿಗಳಾದ ಅಕ್ಷಿತ್ ಮತ್ತು ದಕ್ಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಧ್ರುವನಿಗೆ ಗಂಭೀರ ಗಾಯಗಳಾಗಿವೆ. ಇದರೊಂದಿಗೆ ಇನ್ನೊಂದು ಕಾರು ಚಲಾಯಿಸುತ್ತಿದ್ದ ಸೊಹ್ನಾ ನಿವಾಸಿ ಮೋಹಿತ್ ಮತ್ತು ಪಲ್ವಾಲ್‌ನ ಬೈಕ್ ಸವಾರ ಈಶ್ವರ್ ಎಂಬುವರಿಗೂ ತೀವ್ರ ಗಾಯಗಳಾಗಿವೆ. ಗಾಯಗೊಂಡವರನ್ನು ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಅಪಘಾತದ ಕಾರಣವನ್ನು ತಿಳಿಯಲು ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
गुरुग्राम सोहना एलिवेटेड रोड पर दिल्ली मुम्बई एक्सप्रेस वे के पास
दर्दनाक हादसा हुआ जिसमे कार सवार 5 लोगों में से 2 की मौत हो गई और 3 गंभीर घायल हो गए वीडियो में देख सकते है कि बस को Overtake करने के चक्कर में कार Control से बाहर हो गई है । #Newswani #gurugram pic.twitter.com/t3C8kkR1bR— daily newswani (@DNewswani) November 5, 2024