HomeEntertainmentVideo | ರಿಲೀಸ್ ಆಯ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ 'ಭೈರತಿ ರಣಗಲ್' ಟ್ರೈಲರ್

Video | ರಿಲೀಸ್ ಆಯ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಟ್ರೈಲರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ‘ಭೈರತಿ ರಣಗಲ್’ ಚಿತ್ರ ಇದೇ ನವೆಂಬರ್ 15 ರಂದು  ತೆರೆ ಮೇಲೆ  ಬರಲಿದ್ದು, ಇಂದು ಇದರ ಟ್ರೈಲರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟೈಲರ್ ನೋಡುಗರ ಗಮನ ಸೆಳೆದಿದ್ದು, ಶಿವರಾಜ್ ಕುಮಾರ್ ಅವರ ಖಡಕ್ ಲುಕ್ ಗೆ ಫಿದಾ ಆಗಿದ್ದಾರೆ.

ನರ್ತನ್ ರಚಿಸಿ ನಿರ್ದೇಶಿಸಿರುವ ಈ ಚಿತ್ರವನ್ನು ಗೀತಾ ಶಿವರಾಜಕುಮಾರ್ ತಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಶಿವರಾಜ್ ಕುಮಾರ್ ಗೆ ಜೋಡಿಯಾಗಿ ರುಕ್ಮಿಣಿ  ವಸಂತ್ ಅಭಿನಯಿಸಿದ್ದಾರೆ. ಛಾಯಾ ಸಿಂಗ್, ದೇವರಾಜ್, ವಸಿಷ್ಟ ಎನ್. ಸಿಂಹ, ಮಧು ಗುರುಸ್ವಾಮಿ ಉಳಿದ ತಾರಾಂಗಣದಲ್ಲಿದ್ದಾರೆ.

ರವಿ ಬಸ್ರೂರ್ ಸಂಗೀತ ಸಂಯೋಜನೆ ನೀಡಿದ್ದು, ಆಕಾಶ್ ಹಿರೇಮಠ ಸಂಕಲನ, ಹಾಗೂ ದಿಲೀಪ್ ಸುಬ್ಬರಾಯನ್ ಮತ್ತು ಚೇತನ್ ಡಿಸೋಜಾ ಅವರ ಸಾಹಸ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular