ಬೆಂಗಳೂರು: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಪರಭಾಷಿಕರಿಗೆ ಕನ್ನಡ ಕಲಿಸುವ ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಆಟೋ ಚಾಲಕರಿಗೆ ಕನ್ನಡ/ಇಂಗ್ಲೀಷ್ ನಲ್ಲಿರುವ ಕೆಲ ಬೇಸಿಕ್ ವಾಕ್ಯಗಳನ್ನೊಳಗೊಂಡ ಕಾರ್ಡ್ ಗಳನ್ನು ಬೆಂಗಳೂರು ಸಂಚಾರಿ ಪೊಲಿಸರು ಹಂಚಿಸಿದ್ದಾರೆ. ಲ್ಯಾಮಿನೇಟೆಡ್ ಕಾರ್ಡ್ ಗಳಲ್ಲಿ ಚಾಲಕರು ಹಾಗೂ ಪ್ರಯಾಣಿಕರ ನಡುವಿನ ಸಂವಹನ ಸುಲಭಗೊಳಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾದ ಕೆಲ ವಾಕ್ಯಗಳನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮುದ್ರಿಸಲಾಗಿದೆ. ‘ಲರ್ನ್ ಕನ್ನಡ ವಿತ್ ಆಟೋ ಕನ್ನಡಿಗ’ ಎಂಬ ವಿಶಿಷ್ಟ ಕಾನ್ಸೆಪ್ಟ್ ಮೂಲಕ ಪರಭಾಷಿಕರಿಗೆ ಕೆಲವೊಂದು ಬೇಸಿಕ್ ಕನ್ನಡ ಪದಗಳನ್ನು ಕಲಿಸುವ ಯತ್ನ ಇದಾಗಿದೆ.
ಆಟೋದಲ್ಲಿ ಪ್ರಯಾಣಿಸುವಾಗ ಮಾತನಾಡುವ ಸಾಮಾನ್ಯ ವಾಕ್ಯಗಳನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮುದ್ರಿಸಿ ಆಟೋದಲ್ಲಿ ಅಂಟಿಸಲಾಗಿದೆ. ಪ್ರತಿ ಕಾರ್ಡ್ ನಲ್ಲಿ ಕ್ಯೂ ಆರ್ ಕೋಡ್ ಕೂಡ ಇದ್ದು ಸ್ಕ್ಯಾನ್ ಮಾಡಿದರೆ ಕನ್ನಡ ಬಳಕೆಯ ಕುರಿತ ವಿಡಿಯೋ ಪ್ಲೇ ಆಗಲಿದೆ. ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಪರ ಭಾಶಿಹಿಕರಿಗೆ ಕನ್ನಡ ಕಲಿಸುವ ಸಣ್ಣ ಪ್ರಯತ್ನ ಇದಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.