ಭೋಪಾಲ್: ಅಡುಗೆ ಮಾಡುವಾಗ ಕುದಿಯುವ ಎಣ್ಣೆಯ ಬಾಣಲೆಗೆ ಮೊಬೈಲ್ ಫೋನ್ ಬಿದ್ದು ಸ್ಫೋಟಗೊಂಡು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮೃತರನ್ನ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಲಾಹರ್ ಮೂಲದ ಚಂದ್ರ ಪ್ರಕಾಶ್ ಎಂದು ಗುರುತಿಸಲಾಗಿದೆ. ಮೃತರು ಪತ್ನಿ, 14 ವರ್ಷದ ಮಗಳು ಮತ್ತು 8 ವರ್ಷದ ಮಗನನ್ನು ಅಗಲಿದ್ದಾರೆ. ನಿನ್ನೆ, ಚಂದ್ರ ಪ್ರಕಾಶ್ ತನ್ನ ಮೊಬೈಲ್ ನಲ್ಲಿ ಅಡುಗೆ ಮಾಡುವುದನ್ನು ನೋಡುತ್ತಾ ಮಾಂಸ ಬೇಯಿಸುತ್ತಿದ್ದರು. ಆಗ ಅವರ ಕೈಯಲ್ಲಿದ್ದ ಮೊಬೈಲ್ ಫೋನ್ ಜಾರಿ ಕುದಿಯುವ ಎಣ್ಣೆ ಪಾತ್ರೆಗೆ ಬಿದ್ದಿತು.
ಪರಿಣಾಮ ಚಂದ್ರ ಪ್ರಕಾಶ್ ಅವರ ಮೊಬೈಲ್ ಫೋನ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದರಿಂದ ಅವರ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಬೆಂಕಿ, ಎಣ್ಣೆ ಹತ್ತಿರ ಮೊಬೈಲ್ ಬಳಸುವವರು ಎಚ್ಚರದಿಂದಿರಬೇಕು.