ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಡಿಕೆ ದರ ಹೆಚ್ಚಾಗಿರುವುದು ಬೆಳೆಗಾರರ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.
ಕಳೆದ ಎರಡು ದಿನಗಳಿಂದ ಅಡಿಕೆ ದರ ಕ್ವಿಂಟಲ್ ಗೆ 51,000 ರೂ. ತಲುಪಿದೆ. ಒಂದು ವಾರದ ಹಿಂದೆ ಕ್ವಿಂಟಲ್ ಅಡಿಕೆ ದರ 41,000 ದಿಂದ 45,000 ರೂ. ಆಸು ಪಾಸಿನಲ್ಲಿತ್ತು. ಬೆಳೆಗಾರರು ಅಡಿಕೆ ಮಾರಾಟ ಮಾಡಲು ಹಿಂದೇಟು ಹಾಕಿದ್ದರು. ಇದೀಗ ಅಡಿಕೆ ದರ 51,000 ರೂ. ತಲುಪುತ್ತಿದ್ದಂತೆ ಬೆಳೆಗಾರರು ಅಡಿಕೆ ಮಾರಾಟಕ್ಕೆ ಮುಂದಾಗಿದ್ದಾರೆ.
ಚನ್ನಗಿರಿ ಭಾಗದಲ್ಲಿ ಸುಮಾರು 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಬಾರಿ ಉತ್ತಮ ಮುಂಗಾರು ಮುಂಗಾರು ಮಳೆಯಾಗಿರುವುದರಿಂದ ಅಡಿಕೆ ಬೆಳೆಗಾರರಿಗೆ ನೀರಿನ ಸಮಸ್ಯೆ ಎದುರಾಗಿಲ್ಲ. ಅಡಿಕೆ ಕೊಯ್ಲು ಮುಂದುವರೆದಿದ್ದು, ಇನ್ನೂ ಒಂದು ತಿಂಗಳ ಕಾಲ ನಡೆಯಲಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಇಳುವರಿ ಹೆಚ್ಚಾಗಿದ್ದು, ಕ್ವಿಂಟಲ್ ಗೆ ಕನಿಷ್ಠ 43,299 ರೂ., ಗರಿಷ್ಠ 51,000 ರೂ., ಸರಾಸರಿ 49,407 ರೂಪಾಯಿ ದರ ಇದ್ದು, ಹೆಚ್ಚಿನ ರೈತರು ಅಡಿಕೆ ಮಾರಾಟಕ್ಕೆ ಮುಂದಾಗಿದ್ದಾರೆ.