alex Certify ಶ್ರೀಲಂಕಾದಲ್ಲಿ ಪತ್ತೆಯಾಯ್ತಾ ಕುಂಭಕರ್ಣನ ಬೃಹತ್‌ ಖಡ್ಗ ? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಲಂಕಾದಲ್ಲಿ ಪತ್ತೆಯಾಯ್ತಾ ಕುಂಭಕರ್ಣನ ಬೃಹತ್‌ ಖಡ್ಗ ? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋ ಒಂದರಲ್ಲಿ ರಾಮಾಯಣದಲ್ಲಿ ವಿವರಿಸಲಾದ ಲಂಕಾಧಿಪತಿ ರಾವಣನ ಕಿರಿಯ ಸಹೋದರ ಕುಂಭಕರ್ಣ ಬಳಸುತ್ತಿದ್ದ ಖಡ್ಗ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಅದರಲ್ಲಿ ಬೃಹತ್ ಕತ್ತಿಯನ್ನೂ ತೋರಿಸಲಾಗಿದ್ದು, ಈ ವೈರಲ್ ಫೋಟೋ ಕುರಿತು ತನಿಖೆ ಮಾಡಿದ ಬಳಿಕ ಈ ಹೇಳಿಕೆಯ ಸತ್ಯ ಮತ್ತು ವಾಸ್ತವತೆ ಈಗ ಮುನ್ನೆಲೆಗೆ ಬಂದಿದೆ.

ಭಾರತದಲ್ಲಿ ದಸರಾದಂದು ರಾವಣನನ್ನು ದಹನ ಮಾಡುವುದು ಮತ್ತು ದೀಪಾವಳಿಯಂದು ರಾಮಲೀಲಾ ಮಾಡುವುದು ಸಾಮಾನ್ಯವಾಗಿದ್ದು, ಇದರ ಮಧ್ಯೆ ಲಂಕಾದ ರಾಜ ರಾವಣನ ಕಿರಿಯ ಸಹೋದರ 5000 BC ಹಿಂದಿನ ಕುಂಭಕರ್ಣನ ಬೃಹತ್ ಖಡ್ಗ ಪತ್ತೆಯಾಗಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಈ ವೀಡಿಯೊದಲ್ಲಿ, ರಕ್ಷಣಾತ್ಮಕ ಹೆಲ್ಮೆಟ್‌ ಧರಿಸಿರುವ ಕೆಲವರು ಕತ್ತಿಯನ್ನು ವೀಕ್ಷಿಸುತ್ತಿದ್ದು, ಇದು ಸುರಂಗದೊಳಗೆ ಇರುವಂತೆ ಕಂಡು ಬರುತ್ತಿದೆ. ಅಲ್ಲದೇ ಈ ಬೃಹತ್ ಖಡ್ಗ‌ ಕುಂಭಕರ್ಣನದ್ದು ಎಂದು ಹೇಳಲಾಗುತ್ತಿದೆ. ಕುಂಭಕರ್ಣ, ಲಂಕಾಧಿಪತಿ ರಾವಣನ ಕಿರಿಯ ಸಹೋದರನಾಗಿದ್ದು, ಅವನ ಕುರಿತ ವಿವರಣೆಯು ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಕಂಡುಬರುತ್ತದೆ. ನಾಲ್ಕು ಸ್ಲೈಡ್‌ಗಳನ್ನು ತೋರಿಸುವ ಈ ವೀಡಿಯೊದಲ್ಲಿ, ಪುರಾತತ್ತ್ವಜ್ಞರು ಖಡ್ಗದ ಬಳಿ ನಿಂತಿದ್ದಾರೆ ಎಂದು ಹೇಳಲಾಗುತ್ತದೆ.

ಅದನ್ನು ಹಂಚಿಕೊಳ್ಳುವಾಗ ಕುಂಭಕರ್ಣನ ಖಡ್ಗ ಸಿಕ್ಕಿದೆ ಎಂದು ಹಲವರು ಹೇಳಿಕೊಂಡಿದ್ದಾರೆ. ಆದರೆ ವೈರಲ್ ಆಗುತ್ತಿರುವ ಚಿತ್ರಗಳ ಹಿಂದಿನ ಸತ್ಯವೇನು ? ತಿಳಿಯೋಣಾ ಬನ್ನಿ.

ನ್ಯೂಸ್‌ ಚೆಕರ್ ಈ ಚಿತ್ರಗಳನ್ನು ಪರಿಶೀಲಿಸಿದಾಗ ಖಡ್ಗದ ಬಳಿ ಇರುವ ಜನರ ಮುಖಗಳು ಸ್ಪಷ್ಟವಾಗಿಲ್ಲದಿರುವುದು ಕಂಡುಬಂದಿದೆ. ಇದರೊಂದಿಗೆ, ಎಲ್ಲಾ ನಾಲ್ಕು ಚಿತ್ರಗಳಲ್ಲಿ ಹೆಚ್ಚುವರಿ ಹೊಳೆಯುವ ವಿನ್ಯಾಸವಿದ್ದು, ಈ ಎಲ್ಲಾ ಚಿಹ್ನೆಗಳು AI ಚಿತ್ರಣವನ್ನು ಸೂಚಿಸುತ್ತವೆ. ಅಂದರೆ, ಕೃತಕ ಬುದ್ಧಿಮತ್ತೆ (AI ಇಮೇಜ್) ಬಳಸಿ ಇದನ್ನು ರಚಿಸಲಾಗಿದೆ.

ಈ ಫೋಟೋಗಳನ್ನು AI ಕಂಟೆಂಟ್ ಡಿಟೆಕ್ಷನ್ ಟೂಲ್ ಟ್ರೂ ಮೀಡಿಯಾ ಪರಿಶೀಲಿಸಿದ್ದು, ಫೋಟೋಗಳನ್ನು ಮೌಲ್ಯಮಾಪನ ಮಾಡಿದ ನಂತರ, ಟ್ರೂ ಮೀಡಿಯಾವು AI ಅನ್ನು ಬಳಸಿಕೊಂಡು ದೃಶ್ಯಗಳನ್ನು ರಚಿಸಲಾಗಿದೆ ಎಂದು 99% ವಿಶ್ವಾಸ ಹೊಂದಿದೆ. ಈ ಫೋಟೋವನ್ನು ಸ್ಟೇಬಲ್ ಡಿಫ್ಯೂಷನ್, ಮಿಡ್‌ಜರ್ನಿ, ಡೆಲ್ ಇ2 ಮತ್ತು ಇತರ ಎಐ-ರಚಿಸಿದ ಫೋಟೋ-ರಿಯಲಿಸ್ಟಿಕ್ ದೃಶ್ಯಗಳನ್ನು ಬಳಸಿ ರಚಿಸಲಾಗಿದೆ ಎಂದು TrueMedia ಹೇಳಿದೆ. ಈ ಆಧಾರದ ಮೇಲೆ, ಫೋಟೋ ಕುರಿತು ನೀಡಲಾಗುತ್ತಿರುವ ಮಾಹಿತಿ ಸುಳ್ಳು ಎಂದು ಸಾಬೀತಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...