ಬೆಂಗಳೂರು : ಬಿಜೆಪಿಗರ ನಕಲಿ ಹಿಂದೂ ಪ್ರೇಮದ ಮೊಸಳೆ ಕಣ್ಣೀರು ಬಟಾ ಬಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ʻ2019ರಿಂದ 2022ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಆಪರೇಷನ್ ಕಮಲದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಕ್ಫ್ ಬೋರ್ಡ್ ವಿಜಯಪುರದ ರೈತರಿಗೆ ನೀಡಿದ ನೋಟೀಸುಗಳಿವು! ಆಗ ಇರದ ಹಿಂದೂ ಪ್ರೇಮ ಈಗ ಕಪೋಲ ಕಲ್ಪಿತ ಸುಳ್ಳುಗಳ ಆಧಾರದ ಮೇಲೆ ಚಿಗುರೊಡೆದಿದ್ದು ಹೇಗೆ? ವಿಜಯೇಂದ್ರರವರ ಸತ್ಯಶೋಧನಾ ಸಮಿತಿ (ಅತ್ತು-ಗೋಗರೆದು ರಚನೆಗೊಂಡ ಪರಿಷ್ಕೃತ ಸತ್ಯಶೋಧನಾ ಸಮಿತಿ) ಅವರ ಸರ್ಕಾರದ ಅವಧಿಯಲ್ಲಿ ನಮ್ಮ ರೈತರಿಗೆ ಕಳುಹಿಸಿದ ನೋಟೀಸುಗಳಿಗೆ ಉತ್ತರ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ʻಅ.9ರಂದು ಬಿಜಾಪುರದಲ್ಲಿ ವಕ್ಫ್ ಅದಾಲತ್ ಮಾಡಿದಾಗಶಾಸಕ ಯತ್ನಾಳ್ ಅವರಿಗೂ ಆಹ್ವಾನ ನೀಡಲಾಗಿತ್ತು. ಅವರಿಗೆ ರೈತರ ಬಗ್ಗೆ ಕಾಳಜಿಯಿದ್ದಿದ್ದರೆ ಆ ಸಭೆಗೆ ಬಂದು ವಿಚಾರ ಮಂಡನೆ ಮಂಡನೆ ಮಾಡಬಹುದಿತ್ತು. ವಕ್ಫ್ ಅದಾಲತ್ ಆದ ಬಳಿಕ ನಾಲ್ಕು ದಿನಗಳ ನಂತರ ಪ್ರತಿಭಟನೆ ಮಾಡಿದ್ದಾರೆ. ಯತ್ನಾಳ್ ಹಾಗೂ ತೇಜಸ್ವಿ ಸೂರ್ಯ ವಕ್ಫ್ ಆಸ್ತಿಗಳ ಬದಲಾಗಿ, ಒತ್ತುವರಿಯಾಗಿರುವ 740 ಎಕರೆ ಮುಜುರಾಯಿ ಆಸ್ತಿಯನ್ನು ರಕ್ಷಿಸಲು ಹೋರಾಟ ಮಾಡಲಿ ಎಂದಿದ್ದಾರೆ.
ʻʻವಕ್ಫ್ ಭೂಮಿ ಸಮುದಾಯದ ದಾನಿಗಳು ದಾನ ಮಾಡಿರುವಂತದ್ದು. ವಕ್ಫ್ ಭೂಮಿ ಸರಕಾರ ನೀಡಿರುವುದು ಎಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿದೆ. ಸ್ಮಶಾನ ಹೊರತುಪಡಿಸಿ ವಕ್ಫ್ ಅಧೀನದಲ್ಲಿ ಸರಕಾರದ ಒಂದು ಇಂಚು ಜಾಗವೂ ಇಲ್ಲ. 1.12 ಲಕ್ಷ ಎಕರೆ ವಕ್ಫ್ ಭೂಮಿ ದಾನವಾಗಿ ಬಂದಿದೆ. ಅದರಲ್ಲಿ ಉಳಿದಿರುವ 23,860 ಎಕರೆ ಮಾತ್ರ. ಅದನ್ನು ಉಳಿಸಲು ವಕ್ಫ್ ಅದಾಲತ್ಗಳನ್ನು ಪ್ರತಿಯೊಂದು ಜಿಲ್ಲೆಯಲ್ಲಿ ಮಾಡುತ್ತಿದ್ದೇನೆ.ʼ ಎಂಬ ಸಚಿವ ಜಮೀರ್ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.