ಪ್ರತಿ ವರ್ಷ, ಬಾಲಿವುಡ್ ನಲ್ಲಿ ನೂರಾರು ಚಿತ್ರಗಳನ್ನು ನಿರ್ಮಿಸಲಾಗುತ್ತದೆ. ಕೆಲವು ಕಡಿಮೆ-ಬಜೆಟ್ ನಲ್ಲಿ ನಿರ್ಮಿಸಲಾದ ಚಲನಚಿತ್ರಗಳು ಭಾರಿ ಲಾಭವನ್ನು ಗಳಿಸಿದರೆ, ಬೃಹತ್ ಬಜೆಟ್ ನಲ್ಲಿ ತಯಾರಾದ ಕೆಲ ಚಿತ್ರಗಳು ವ್ಯಾಪಕ ಪ್ರಚಾರದ ಹೊರತಾಗಿಯೂ ವಿಫಲವಾಗಿವೆ.
ಭಾರಿ ವೆಚ್ಚದಲ್ಲಿ ತಯಾರಾದ ಚಿತ್ರವೊಂದು ಬಾಕ್ಸ್ ಅಫೀಸ್ ಗಳಿಕೆಯಲ್ಲಿ ಶೋಚನಿಯವಾಗಿ ವಿಫಲವಾಗಿದ್ದರ ಕುರಿತ ಸ್ಟೋರಿ ಇಲ್ಲಿದೆ. ಇಬ್ಬರು ಪ್ರಮುಖ ತಾರೆಯರನ್ನು ಒಳಗೊಂಡಿದ್ದರೂ, ಇದು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ವಾಸ್ತವವಾಗಿ, ಒಂದು ವರ್ಷದ ನಂತರವೂ, ಯಾವುದೇ OTT ಪ್ಲಾಟ್‌ಫಾರ್ಮ್ ಇದನ್ನು ಪ್ರದರ್ಶಿಸಲು ಸಿದ್ಧವಾಗಿಲ್ಲ. ಅದರ ಬಜೆಟ್, ಗಳಿಕೆ ಮತ್ತು ಟಿಕೆಟ್ ಮಾರಾಟವನ್ನು ಪರಿಶೀಲಿಸೋಣ….!
ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಇಬ್ಬರು ಪ್ರಸಿದ್ಧ ತಾರೆಯರು ಅಭಿನಯಿಸಿದ್ದು, 45 ಕೋಟಿ ರೂಪಾಯಿಗಳ ಬಜೆಟ್ ಮತ್ತು ನಿರ್ಮಾಣಕ್ಕಾಗಿ ಒಂದು ವರ್ಷವನ್ನು ತೆಗೆದುಕೊಳ್ಳಲಾಗಿತ್ತು. ಅಚ್ಚರಿಯ ಸಂಗತಿಯೆಂದರೆ ಮೊದಲ ದಿನದ ಮೊದಲ ಪ್ರದರ್ಶನದಲ್ಲಿ ಇದು 300 ಟಿಕೆಟ್‌ಗಳನ್ನು ಸಹ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಪ್ರಚಾರದ ಬೆಂಬಲದ ಕೊರತೆಯು ಅದರ ನೀರಸ ಪ್ರದರ್ಶನಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ, ಈ ಚಿತ್ರ ಫ್ಲಾಪ್ ಆಗಿ ಹೊರಹೊಮ್ಮಿದೆ, ಇತ್ತೀಚಿಗೆ ಬೇರೆ ಯಾವ ಚಿತ್ರವೂ ಈ ಚಿತ್ರದಷ್ಟು ಕಳಪೆ ಪ್ರದರ್ಶನ ನೀಡಿಲ್ಲ.
ಅಜಯ್ ಬಹ್ಲ್ ಅವರ ಕ್ರೈಮ್ ಥ್ರಿಲ್ಲರ್ ʼದಿ ಲೇಡಿ ಕಿಲ್ಲರ್ʼ ಈ ಚಿತ್ರವಾಗಿದ್ದು, ಇದರಲ್ಲಿ ಅರ್ಜುನ್ ಕಪೂರ್ ಮತ್ತು ಭೂಮಿ ಪೆಡ್ನೇಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ₹ 45 ಕೋಟಿ ಬಜೆಟ್‌ನೊಂದಿಗೆ, ಚಲನಚಿತ್ರವು ನಿಧಾನವಾಗಿ ಚಿತ್ರೀಕರಣಗೊಂಡು ಮತ್ತು ಅಂತಿಮವಾಗಿ ನವೆಂಬರ್ 2023 ರಲ್ಲಿ ಬಿಡುಗಡೆಯಾಯಿತು. ರಾಷ್ಟ್ರವ್ಯಾಪಿ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಪ್ರಥಮ ಪ್ರದರ್ಶನ ಕಂಡಿದ್ದು, ಅನೇಕ ಚಿತ್ರಮಂದಿರಗಳು ಅದರ ಹಕ್ಕುಗಳನ್ನು ಪಡೆಯಲು ಹಿಂದೇಟು ಹಾಕಿದ್ದವು.
ʼದಿ ಲೇಡಿ ಕಿಲ್ಲರ್ʼ ತನ್ನ ಆರಂಭಿಕ ದಿನದಂದು ಮೊದಲ ಪ್ರದರ್ಶನದಲ್ಲಿ ಕೇವಲ 293 ಟಿಕೆಟ್‌ಗಳನ್ನು ಮಾರಾಟ ಮಾಡಿತು, ಅಲ್ಲದೇ ಮೊದಲ ದಿನ ಒಟ್ಟಾರೆ 38,000 ರೂಪಾಯಿಗಳನ್ನು ಗಳಿಸಿದ್ದು, ಇದು ಚಲನಚಿತ್ರ ಇತಿಹಾಸದಲ್ಲಿ ಅತ್ಯಂತ ಕಡಿಮೆ ಓಪನಿಂಗ್‌ಗಳಲ್ಲಿ ಒಂದಾಗಿದೆ. ಚಲನಚಿತ್ರವನ್ನು ಕೆಲವೇ ದಿನಗಳಲ್ಲಿ ಪರದೆಯಿಂದ ತೆಗೆದುಹಾಕಲಾಗಿದ್ದು, ಅಂತಿಮವಾಗಿ 60,000 ರೂ.ಗಿಂತ ಕಡಿಮೆ ಆದಾಯವನ್ನು ಗಳಿಸಿತು.
ಇದಾದ ನಂತರ, ಲೇಡಿ ಕಿಲ್ಲರ್‌ನ ತಯಾರಕರಿಗೆ OTT ಬಿಡುಗಡೆಯನ್ನು ಪರಿಗಣಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಆದಾಗ್ಯೂ, ಸುಮಾರು ಒಂದು ವರ್ಷದ ನಂತರ, ಚಲನಚಿತ್ರವು ಯಾವುದೇ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನೂ ಪ್ರದರ್ಶನ ಕಂಡುಕೊಂಡಿಲ್ಲ. ಮೂಲತಃ, ಇದು OTT ನಲ್ಲಿ ಚೊಚ್ಚಲ ಪ್ರವೇಶಕ್ಕೆ ಸಿದ್ಧವಾಗಿತ್ತು, ಆದರೆ ವಿಳಂಬವು ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಹಿಂದೆ ಸರಿಯುವಂತೆ ಮಾಡಿತು.
ಚಿತ್ರ ಬಿಡುಗಡೆಯಾದಾಗಿನಿಂದ ಅರ್ಜುನ್ ಕಪೂರ್ ಆಗಲಿ ಅಥವಾ ಭೂಮಿ ಪೆಡ್ನೇಕರ್ ಆಗಲಿ ಚಿತ್ರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೊನೆಯ ಪ್ರಯತ್ನದಲ್ಲಿ, ಅದನ್ನು YouTube ನಲ್ಲಿ ಉಚಿತವಾಗಿ ಅಪ್‌ಲೋಡ್ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಆಶ್ಚರ್ಯಕರವಾಗಿ, ಇದು ಕೇವಲ ಒಂದು ದಿನದಲ್ಲಿ 500,000 ವೀಕ್ಷಣೆಗಳನ್ನು ಗಳಿಸಿದ್ದು, ಈಗ, ಸುಮಾರು ಒಂದು ತಿಂಗಳ ನಂತರ, ಇದು ಪ್ರಭಾವಶಾಲಿ 2.6 ಮಿಲಿಯನ್ ವೀಕ್ಷಣೆಗಳನ್ನು ತಲುಪಿದೆ.