ಬೆಂಗಳೂರು : …ಬಿಬಿಎಂಪಿ ಘೋಷಿಸಿದ್ದ ಒಂದು ಬಾರಿ ತೀರುವಳಿ (OTS) ಯೋಜನೆ ನವೆಂಬರ್ 30 ಕ್ಕೆ ಮುಕ್ತಾಯವಾಗಲಿದ್ದು, ಆಸ್ತಿ ಮಾಲಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಒಂದು ಬಾರಿ ಪರಿಹಾರ ಯೋಜನೆಯನ್ನು (ಒಟಿಎಸ್) ಹೆಚ್ಚಿನ ವೈಶಿಷ್ಟ್ಯತೆಗಳೊಂದಿಗೆ ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ. ದಂಡ ಮತ್ತು ಬಡ್ಡಿ ರಹಿತ ಪಾವತಿಗೆ ಇದೊಂದು ಕೊನೆಯ ಅವಕಾಶವನ್ನು ನೀಡಲಾಗಿದೆ. ಸದುಪಯೋಗಪಡಿಸಿಕೊಳ್ಳಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಆನ್ಲೈನ್ ಮೂಲಕ ಪಾವತಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ(https://bbmptax.karnataka.gov.in/
ಆಸ್ತಿ ತೆರಿಗೆ ಎಷ್ಟು ಪಾವತಿಸಬೇಕಿದೆ, ಎಲ್ಲಿ ಪಾವತಿಸಬೇಕು ಎಂಬ ಬಗ್ಗೆ ಗೊಂದಲಗಳಿದ್ದಲ್ಲಿ ಸಹಾಯವಾಣಿ 1533 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ಹೊರಡಿಸಿದೆ.ಬಿಬಿಎಂಪಿ ಕಾಯ್ದೆಯಲ್ಲಿ ಆಸ್ತಿತೆರಿಗೆ ಬಾಕಿ ವಸೂಲಾತಿಗೆ ಅವಕಾಶವಿದೆ. ಆದಾಗ್ಯೂ, ಒಟಿಎಸ್ ನಾಗರಿಕರಿಗೆ ಸಹಾಯ ಮಾಡಲು ಸರ್ಕಾರ ಮತ್ತು ಬಿಬಿಎಂಪಿಯೂ ಜೊತೆಯಾಗಿ ಕಾರ್ಯನಿರ್ವಹಿಸಲಿದೆ .ನಾಗರಿಕರು https://bbmptax.karnataka.gov.in ಮೂಲಕ ಆನ್ಲೈನ್ ನಲ್ಲಿ ಆಸ್ತಿತೆರಿಗೆಯನ್ನು ಸುಲಭವಾಗಿ ಪಾವತಿಸಬಹುದು ಎಂದು ಪ್ರಕಟಣೆ ಹೊರಡಿಸಿದೆ.
ಆತ್ಮೀಯ ಬೆಂಗಳೂರಿಗರೇ,
ಒಂದು ಬಾರಿ ಪರಿಹಾರ ಯೋಜನೆಯನ್ನು (ಒಟಿಎಸ್) ಹೆಚ್ಚಿನ ವೈಶಿಷ್ಟ್ಯತೆಗಳೊಂದಿಗೆ ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ. ದಂಡ ಮತ್ತು ಬಡ್ಡಿ ರಹಿತ ಪಾವತಿಗೆ ಇದೊಂದು ಕೊನೆಯ ಅವಕಾಶವನ್ನು ನೀಡಲಾಗಿದೆ. ಸದುಪಯೋಗಪಡಿಸಿಕೊಳ್ಳಿ.#OTS #BBMP @CMofKarnataka @siddaramaiah @DKShivakumar
@Bbmpcares pic.twitter.com/uYhp2m56n4— DIPR Karnataka (@KarnatakaVarthe) September 13, 2024

