ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಬೆಲೆಗಳನ್ನು ಹೋಲಿಸುವ ಮೂಲಕ ಆನ್‌ಲೈನ್ ಶಾಪಿಂಗ್ ಅನ್ನು ಸರಳೀಕರಿಸಲು ವಿನ್ಯಾಸಗೊಳಿಸಲಾದ ಬೆಲೆ-ಹೋಲಿಕೆ ವೆಬ್‌ಸೈಟ್ Foundem ಅನ್ನು ದಂಪತಿ 2006 ರಲ್ಲಿ ಪ್ರಾರಂಭಿಸಿದ್ದು, Foundem ಆ ವರ್ಷದ ಜೂನ್‌ನಲ್ಲಿ ನೇರಪ್ರಸಾರವಾಯಿತು, ಆದರೆ ಗೂಗಲ್ ವಿಧಿಸಿದ ಪೆನಾಲ್ಟಿಯಿಂದಾಗಿ ಅದರ ಆರಂಭಿಕ ವೇಗ ಹಠಾತ್ ಕುಂಠಿತವಾಯಿತು.
ಗೂಗಲ್ ಪೆನಾಲ್ಟಿ, ಅಂದರೆ ದಂಪತಿಯ Foundem ವೆಬ್‌ಸೈಟ್ ಅನ್ನು ಹುಡುಕಾಟದ ಫಲಿತಾಂಶಗಳಲ್ಲಿ ಪಟ್ಟಿ ಮಾಡಲು ಇರುವ ನಿರ್ಬಂಧವಾಗಿದ್ದು, “ಬೆಲೆ ಹೋಲಿಕೆ” ಮತ್ತು “ಹೋಲಿಕೆ ಶಾಪಿಂಗ್” ನಂತಹ ಪದಗಳಿಗಾಗಿ ಸರ್ಚ್ ಎಂಜಿನ್ ಶ್ರೇಯಾಂಕಗಳಲ್ಲಿ ಇರದ ಕಾರಣ Foundem ತೀವ್ರ ವಿಫಲತೆ ಹೊಂದಿತು.
ಆದಾಯ ಗಳಿಸಲು ಕ್ಲಿಕ್‌ಗಳನ್ನು ಅವಲಂಬಿಸಿದ್ದ ವೆಬ್‌ಸೈಟ್ ಲಾಭ ಗಳಿಸಲು ಪರದಾಡಿದ್ದು “ನಮ್ಮ ಶ್ರೇಯಾಂಕಗಳು ತಕ್ಷಣವೇ ಕುಸಿಯುವುದನ್ನು ನಾವು ಗಮನಿಸಿದೆವು” ಎಂದು ಬಿಬಿಸಿ ಉಲ್ಲೇಖಿಸಿದಂತೆ ಆಡಮ್ ಹೇಳಿದ್ದಾರೆ.
ಮೊದಲಿಗೆ, ದಂಪತಿ ಇದನ್ನು ತಾಂತ್ರಿಕ ದೋಷ ಎಂದು ನಂಬಿದ್ದು, ಅದನ್ನು ಪರಿಹರಿಸಲಾಗುವುದು ಎಂಬ ವಿಶ್ವಾಸದಿಂದ ಗೂಗಲ್‌ಗೆ ಮನವಿ ಮಾಡಿದ್ದರು. ಆದಾಗ್ಯೂ, ಎರಡು ವರ್ಷಗಳು ಯಾವುದೇ ನಿರ್ಣಯವಿಲ್ಲದೆ ಸರಿದುಹೋಗಿದ್ದು, ಇತರ ಸರ್ಚ್ ಇಂಜಿನ್‌ಗಳಲ್ಲಿ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ, Foundem ಗೂಗಲ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಅಸ್ಪಷ್ಟವಾಗಿ ಉಳಿಯಿತು. ಪ್ರತಿಯೊಬ್ಬರೂ Google ಬಳಸುತ್ತಿದ್ದ ಕಾರಣ ದಂಪತಿಯ Foundem ವೆಬ್ ಸೈಟ್ ಸರ್ಚ್ ಇಂಜಿನ್ ನಲ್ಲಿ ಬರುತ್ತಿರಲಿಲ್ಲ.
2008 ರಲ್ಲಿ, ಚಾನಲ್ 5 ರ ದಿ ಗ್ಯಾಜೆಟ್ ಶೋನಿಂದ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ, Foundem ಸ್ವಲ್ಪ ಗೋಚರತೆಯನ್ನು ಮರಳಿ ಪಡೆದಿದ್ದು, ಆದರೆ ಪರಿಣಾಮಕಾರಿ ಗುರುತಿಸುವಿಕೆಯು Foundem ನ ನ್ಯಾಯಸಮ್ಮತತೆಯನ್ನು ಒತ್ತಿಹೇಳುತ್ತದೆ ಎಂದು ಆಶಿಸಿದ್ದರು, ಆದರೆ Google ನ ಪ್ರತಿಕ್ರಿಯೆ ಮಾತ್ರ ನಿರಾಶದಾಯಕವಾಗಿತ್ತು.
ನಂತರ ದಂಪತಿ ತಮ್ಮ ಪ್ರಕರಣವನ್ನು ಯುಕೆ, ಯುಎಸ್ ಮತ್ತು ಅಂತಿಮವಾಗಿ ಬ್ರಸೆಲ್ಸ್‌ನಲ್ಲಿರುವ ನಿಯಂತ್ರಕ ಸಂಸ್ಥೆಗಳಿಗೆ ಕೊಂಡೊಯ್ದಿದ್ದು, 2010 ರಲ್ಲಿ ಯುರೋಪಿಯನ್ ಕಮಿಷನ್ (EC) Google ನ ಅಭ್ಯಾಸಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದಾಗ ಅವರ ಪ್ರಯತ್ನ ಫಲ ನೀಡಿತು.
2017 ರಲ್ಲಿ, EC ಯು ಗೂಗಲ್ ವಿರುದ್ಧ ತೀರ್ಪು ನೀಡಿದ್ದು, ಕಂಪನಿಯು ತನ್ನ ಮಾರುಕಟ್ಟೆ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಘೋಷಿಸಿತು ಮತ್ತು 2.4 ಶತಕೋಟಿ ಯುರೋ (21,824 ಕೋಟಿ ರೂ.) ದಂಡವನ್ನು ವಿಧಿಸಿತು. ಈ ಪ್ರಕರಣವು ಜಾಗತಿಕ ಬಿಗ್ ಟೆಕ್ ನಿಯಂತ್ರಣದಲ್ಲಿ ಒಂದು ಮೈಲಿಗಲ್ಲು ಆಯಿತು.
ಆದಾಗ್ಯೂ, Google ಮೇಲ್ಮನವಿಗಳ ಸರಣಿಯನ್ನು ಪ್ರಾರಂಭಿಸಿದ್ದು, ಕಾನೂನು ಹೋರಾಟವನ್ನು ವರ್ಷಗಳವರೆಗೆ ವಿಸ್ತರಿಸಿತು. ಸೆಪ್ಟೆಂಬರ್ 2024 ರಲ್ಲಿ, ಯುರೋಪ್‌ನ ಉನ್ನತ ನ್ಯಾಯಾಲಯವು ಆರಂಭಿಕ ತೀರ್ಪನ್ನು ಎತ್ತಿಹಿಡಿದಿದೆ, ಗೂಗಲ್‌ನ ಕ್ರಮಗಳು ಸ್ಪರ್ಧಾತ್ಮಕ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ದೃಢಪಡಿಸಿದೆ.
ಆದಾಗ್ಯೂ, ದಂಪತಿ ತಕ್ಷಣಕ್ಕೆ ಫಲ ಪಡೆದಿರಲಿಲ್ಲ. ಯೂರೋಪ್‌ನ ಉನ್ನತ ನ್ಯಾಯಾಲಯವು ಅಂತಿಮವಾಗಿ ಸೆಪ್ಟೆಂಬರ್ 2024 ರಲ್ಲಿ ತೀರ್ಪನ್ನು ಎತ್ತಿಹಿಡಿದಿದ್ದು, ಗೂಗಲ್ ಇದರ ವಿರುದ್ದವೂ ಮೇಲ್ಮನವಿ ಸಲ್ಲಿಸುತ್ತಾ ಕಾಯ್ದು ನೋಡಬೇಕಿದೆ.