HomeCrimeಚಿನ್ನದ ಸರಕ್ಕಾಗಿ ನೆರೆಮನೆ ಮಹಿಳೆ ಕೊಂದ ದಂಪತಿ ‘ದೃಶ್ಯಂ’ ಶೈಲಿಯಲ್ಲಿ ಕತೆ ಹೇಳಿದ್ರು…

ಚಿನ್ನದ ಸರಕ್ಕಾಗಿ ನೆರೆಮನೆ ಮಹಿಳೆ ಕೊಂದ ದಂಪತಿ ‘ದೃಶ್ಯಂ’ ಶೈಲಿಯಲ್ಲಿ ಕತೆ ಹೇಳಿದ್ರು…

ಗುಜರಾತ್‌ನ ನಾಡಿಯಾದ್ ನಗರದಲ್ಲಿ ಚಿನ್ನದ ಸರಕ್ಕಾಗಿ ದಂಪತಿಗಳು ತಮ್ಮ ನೆರೆ ಮನೆ ಮಹಿಳೆಯನ್ನು ಕೊಲೆ ಮಾಡಿದ್ದಾರೆ. ಪಾರಾಗಲು ‘ದೃಶ್ಯಂ’ ಸಿನಿಮಾ ರೀತಿ ಸನ್ನಿವೇಶ ಸೃಷ್ಟಿಸಿದ್ದಾರೆ.

ಜಯದೀಪ್ ಸೋನಿ ಮತ್ತು ಲತಾ ದಂಪತಿ ಆರ್ಥಿಕ ಸಂಕಷ್ಟ ಕಡಿಮೆ ಮಾಡಿಕೊಳ್ಳಲು ಕೊಲೆಗೆ ಸಂಚು ರೂಪಿಸಿದ್ದಾರೆ. ಅವರು ತಮ್ಮ ನೆರೆಯ 29 ವರ್ಷದ ಸೌಮಿಯಾ ಅವರನ್ನು ಸೆಪ್ಟೆಂಬರ್ 28 ರಂದು ತಮ್ಮ ಮನೆಗೆ ಆಹ್ವಾನಿಸಿದ್ದು, ಅಡುಗೆ ಬಗ್ಗೆ ಚರ್ಚೆ ನಡೆಸುವ ನೆಪದಲ್ಲಿ ಹೊಡೆದು ಕೊಲೆ ಮಾಡಿದ್ದಾರೆ.

ಆಕೆಯ ಶವವನ್ನು ಸೆಣಬಿನ ಚೀಲದಲ್ಲಿ ತುಂಬಿ ದ್ವಿಚಕ್ರ ವಾಹನದಲ್ಲಿ ಮಾಹಿ ಕಾಲುವೆಗೆ ಸಾಗಿಸಿ ಅಲ್ಲಿ ಶವವನ್ನು ಎಸೆದಿದ್ದಾರೆ. ದಂಪತಿ ಸೌಮಿಯಾ ಅವರ 70 ಗ್ರಾಂ ಚಿನ್ನದ ಸರವನ್ನು ಕದ್ದು ಸುಮಾರು 3 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಡೀ ಘಟನೆಯ ನಂತರ, ದಂಪತಿಗಳು ತಮ್ಮ ಸಹಜ ಜೀವನಕ್ಕೆ ಮರಳಿದರು ಮತ್ತು ತಮ್ಮ ಮಕ್ಕಳಿಗೆ ಹೊಸ ಬಟ್ಟೆ ಮತ್ತು ದ್ವಿಚಕ್ರ ವಾಹನವನ್ನು ಖರೀದಿಸಲು ಹಣವನ್ನು ಬಳಸಿದರು. ಈ ವಾರ ಸೌಮಿಯಾ ಅವರ ಪತಿ ನಾಪತ್ತೆ ಪ್ರಕರಣದ ದೂರು ದಾಖಲಿಸಿದ ನಂತರ ಅವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಸೌಮಿಯಾ ಶವವನ್ನು ಸೆಪ್ಟೆಂಬರ್ 30 ರಂದು ಮಾಹಿ ಕಾಲುವೆಯಿಂದ ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಯ ವರದಿ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜಯದೀಪ್ ಸೋನಿ ಮತ್ತು ಲತಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಅವರ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ತನಿಖೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದಂಪತಿಗಳು ಘಟನೆ ಸಂಭವಿಸಿದಾಗ ಅವರು ಊರಿಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿ ಬಸ್ ಟಿಕೆಟ್‌ಗಳನ್ನು ತೋರಿಸಿದ್ದಾರೆ.

ಆದರೆ ದ್ವಿಚಕ್ರ ವಾಹನದಲ್ಲಿ ದಂಪತಿಗಳು ಮಾಹಿ ಕಾಲುವೆಗೆ ಗೋಣಿಚೀಲವನ್ನು ಹೊತ್ತೊಯ್ಯುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆಹಚ್ಚಿದ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಇನ್‌ಸ್ಪೆಕ್ಟರ್ ಜೆ.ಹೆಚ್. ವಘೇಲಾ ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular