ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು ವತಿಯಿಂದ 2023-24 ಮತ್ತು 2024-25ನೇ ಸಾಲಿನ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ “ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ” ಸಮಾರಂಭವನ್ನು ಅಕ್ಟೋಬರ್ 28 ರಂದು ಸಂಜೆ 6.00 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ಎಸ್. ತಂಗಡಗಿ ಮಾಡಲಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ್ ಬಿ. ಗರುಡಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್, ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಎಂ.ಎನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಧರಣೀದೇವಿ ಮಾಲಗತ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷ ಶುಭ ಧನಂಜಯ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟಾರ್ ಎನ್. ನರೇಂದ್ರಬಾಬು ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸರ್ವ ಸದಸ್ಯರು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
2023-24ನೇ ಸಾಲಿನ “ಕರ್ನಾಟಕ ಕಲಾಶ್ರೀ” ಪ್ರಶಸ್ತಿಯ ಪುರಸ್ಕೃತರು
ಗೌರವ ಪ್ರಶಸ್ತಿಗೆ ಹಿಂದೂಸ್ಥಾನಿ ಸಂಗೀತ- ಗಾಯನದಲ್ಲಿ ಬಳ್ಳಾರಿಯ ಡಿ. ಕುಮಾರ್ ದಾಸ್ ಮತ್ತು ಸುಗಮ ಸಂಗೀತದಲ್ಲಿ ರಾಯಚೂರಿನ ಅಂಬಯ್ಯ ನುಲಿ.
ವಾರ್ಷಿಕ ಪ್ರಶಸ್ತಿ ವಿಭಾಗ: (ಕರ್ನಾಟಕ ಸಂಗೀತದಲ್ಲಿ)- ಬೆಂಗಳೂರಿನ ಪದ್ಮ ಗುರುದತ್ – ಹಾಡುಗಾರಿಕೆ, ಮೈಸೂರಿನ ರೇವತಿ ಕಾಮತ್ – ವೀಣೆ, ಕೋಲಾರದ ವಿ. ರಮೇಶ್ – ನಾದಸ್ವರ ಮತ್ತು ಮಂಗಳೂರಿನ ಕದ್ರಿ ರಮೇಶ್ ನಾಥ್ – ಸ್ಯಾಕ್ಸೋಪೋನ್.
ಹಿಂದೂಸ್ಥಾನಿ ಸಂಗೀತ: ಕೊಪ್ಪಳದ ವಿರೂಪಾಕ್ಷ ರೆಡ್ಡಿ ಓಣಿಮನಿ-ಗಾಯನ, ಧಾರವಾಡದ ಶಫಿಖಾನ್ – ಸಿತಾರಾ ಮತ್ತು ಹುಬ್ಬಳ್ಳಿಯ ಸತೀಶ್ ಹಂಪಿಹೋಳಿ – ತಬಲ.
ನೃತ್ಯ ವಿಭಾಗ: ಬೆಂಗಳೂರಿನ ಸವಿತಾ ಅರುಣ, ಮಾಲಾ ಶಶಿಕಾಂತ್, ಒಡಿಸ್ಸಿಯ ಶರ್ಮಿಳಾ ಮುಖರ್ಜಿ ಮತ್ತು ಆನೇಕಲ್ನ ಸೈಯದ್ ಸಲ್ಲಾವುದ್ದೀನ್ ಪಾಶಾ.
ಸುಗಮ ಸಂಗೀತ ವಿಭಾಗ: ಬೆಂಗಳೂರಿನ ಆನಂದ ಮಾದಲಗೆರೆ, ಕಥಾ ಕೀರ್ತನೆ ವಿಭಾಗ: ಮಂಡ್ಯದ ಎಂ. ಎಸ್. ನಾಗರಾಜಾಚಾರ್.
ಗಮಕ ವಿಭಾಗ: ಬೆಂಗಳೂರಿನ ಜಿ. ಎಸ್. ನಾರಾಯಣ- ವಾಚನ. ಹೊರದೇಶ ಕನ್ನಡ ಕಲಾವಿದರ ವಿಭಾಗ: ಅಮೇರಿಕಾದ ಕೆ.ಆರ್ಎ ಸ್. ಪ್ರಸನ್ನ, ಕಸ್ತೂರಿ- ಭರತನಾಟ್ಯ.
ಸಂಘ ಸಂಸ್ಥೆ ವಿಭಾಗ: ಬೆಂಗಳೂರಿನ ಶ್ರೀವಾಣಿ ಸ್ಕೂಲ್ ಎಜುಕೇಶನ್ ಟ್ರಸ್ಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2024-25ನೇ ಸಾಲಿನ “ಕರ್ನಾಟಕ ಕಲಾಶ್ರೀ” ಪ್ರಶಸ್ತಿಯ ಪುರಸ್ಕೃತರು
ಗೌರವ ಪ್ರಶಸ್ತಿ ವಿಭಾಗ: (ಕರ್ನಾಟಕ ಸಂಗೀತ)- ಗಾಯನದಲ್ಲಿ ಬೆಂಗಳೂರಿನ ಭಾನುಮತಿ ನರಸಿಂಹನ್ ಮತ್ತು ನೃತ್ಯದಲ್ಲಿ ಹಾಸನದ ಗಾಯತ್ರಿ ಕೇಶವನ್.
ವಾರ್ಷಿಕ ಪ್ರಶಸ್ತಿ ವಿಭಾಗ: (ಕರ್ನಾಟಕ ಸಂಗೀತದಲ್ಲಿ) – ಬೆಂಗಳೂರಿನ ವಾನರಾಶಿ ಬಾಲಕೃಷ್ಣ ಭಾಗವತರ, ಬೆಂಗಳೂರಿನ ಎಸ್.ವಿ. ಗಿರಿಧರ್- ಮೃದಂಗ, ಹೊಸಕೋಟೆಯ ಕೆ.ಎಸ್ ನಾಗಭೂಷಣಯ್ಯ-ಪಿಟೀಲು.
ಹಿಂದೂಸ್ಥಾನಿ ಸಂಗೀತ: ಗುಲಬರ್ಗಾದ ಮಹದೇವಪ್ಪ ಪೂಜಾರ, ಬೆಳಗಾಂನ ರವೀಂದ್ರ ಕಾಟೋಟಿ-ಹಾರ್ಮೋನಿಯಂ, ಉತ್ತರ ಕನ್ನಡದ ಅನಂತ ಭಾಗವತ್-ಗಾಯನ.
ನೃತ್ಯ ವಿಭಾಗ: ಬೆಳಗಾಂನ ಟಿ. ರವೀಂದ್ರಶರ್ಮ, ಬೆಂಗಳೂರಿನ ಅನುರಾಧ ವಿಕ್ರಾಂತ್, ಬೆಂಗಳೂರಿನ ಸುಗ್ಗನಹಳ್ಳಿ ಷಡಾಕ್ಷರಿ ಮತ್ತು ಬೆಂಗಳೂರಿನ ಬಿ.ಆರ್.ಹೇಮಂತ ಕುಮಾರ್-ನೃತ್ಯಕ್ಕೆ ಪಿಟೀಲು.
ಸುಗಮ ಸಂಗೀತ ವಿಭಾಗ: ರಾಯಚೂರಿನ ಸೂಗೂರೇಶ ಆಸ್ಕಿಹಾಳ್ ಮತ್ತು ಬೆಂಗಳೂರಿನ ಎನ್.ಎಲ್. ಶಿವಶಂಕರ್-ಪಕ್ಕವಾದ್ಯ-ತಬಲಾ
ಕಥಾ ಕೀರ್ತನೆ ವಿಭಾಗ: ಕೋಲಾರದ ಕೆ.ಎನ್.ಕೃಷ್ಣಪ್ಪ.
ಗಮಕ ವಿಭಾಗ: ಹಾಸನದ ರತ್ನಾಮೂರ್ತಿ-ವ್ಯಾಖ್ಯಾನ
ಸಂಘ ಸಂಸ್ಥೆ ವಿಭಾಗ: ಗದಗಿನ ವೀರೇಶ್ವರ ಪುಣ್ಯಾಶ್ರಮ ಮತ್ತು ಬೆಂಗಳೂರಿನ ಸುನಾದ ನಾದ ಕಲ್ಚರಲ್ ಸೆಂಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.