alex Certify BIG NEWS : ರಾಜ್ಯದ 8,9,10 ನೇ ತರಗತಿಯ ‘ಮಧ್ಯವಾರ್ಷಿಕ ಪರೀಕ್ಷೆ’ ಫಲಿತಾಂಶ ಪ್ರಕಟಿಸದಂತೆ ‘ಶಿಕ್ಷಣ ಇಲಾಖೆ’ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದ 8,9,10 ನೇ ತರಗತಿಯ ‘ಮಧ್ಯವಾರ್ಷಿಕ ಪರೀಕ್ಷೆ’ ಫಲಿತಾಂಶ ಪ್ರಕಟಿಸದಂತೆ ‘ಶಿಕ್ಷಣ ಇಲಾಖೆ’ ಆದೇಶ

ಬೆಂಗಳೂರು : ರಾಜ್ಯದ 8,9,10 ನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸದಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಘನ ಸರ್ವೋಚ್ಚ ನ್ಯಾಯಾಲಯದ ದಾವೆ ಸಂಖ್ಯೆ ಎಸ್.ಎಲ್.ಪಿ. ಸಂಖ್ಯೆ-8142/2024 ಸಂಬಂಧಿಸಿದಂತೆ ದಿನಾಂಕ: 21-10-2024 ರಂದು ನೀಡಿದ ಮಧ್ಯಂತರ ತೀರ್ಪಿನ ಅನ್ವಯ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದ ಮಧ್ಯಂತರ ಆದೇಶದನ್ವಯ, ಘನ ಸರ್ವೋಚ್ಚ ನ್ಯಾಯಾಲಯವು ಮುಂದಿನ ಆದೇಶದವರೆಗೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ 8, 9 ಮತ್ತು 10ನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಯ (SA-1) ಫಲಿತಾಂಶವನ್ನು ಪ್ರಕಟಿಸದಿರಲು ಹಾಗೂ ಯಾವುದೇ ಶಾಲೆಯು ಈವರೆವಿಗೂ ಮಧ್ಯವಾರ್ಷಿಕ ಪರೀಕ್ಷೆ (SA-1) ಅನ್ನು ನಡೆಸಿಲ್ಲದಿದ್ದಲ್ಲಿ ಅಂತಹ ಶಾಲೆಯು ಪರೀಕ್ಷೆಯನ್ನು ನಡೆಸದಿರಲು ಆದೇಶಿಸಿರುತ್ತದೆ. ಅದರಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಡೆಸಲಾಗಿರುವ 8, 9 ಮತ್ತು 10ನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಗಳ (SA-1) ಫಲಿತಾಂಶವನ್ನು ಮುಂದಿನ ಆದೇಶದವರೆಗೂ ಪ್ರಕಟಿಸದಂತೆ ಸಂಬಂಧಿಸಿದ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿ ಅಗತ್ಯ ಕ್ರಮವಹಿಸಲು ತಿಳಿಸಿದೆ ಎಂದು ಆಯುಕ್ತರು ಆದೇಶ ಹೊರಡಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...