ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಬಿಎಂಟಿಸಿ ಕಂಡಕ್ಟರ್ ಕೊಲೆಗೆ ಯತ್ನ ನಡೆಸಲಾಗಿದೆ.
ಪ್ರಯಾಣಿಕನೋರ್ವ ಕಂಡಕ್ಟರ್ ತಲೆಗೆ ಕಲ್ಲು ಹೊಡೆದ ಘಟನೆ ಅ.18 ರಂದು ಟಿನ್ ಫ್ಯಾಕ್ಟರಿ ಬಳಿ ನಡೆದಿದೆ.
ಪಾಸ್ ತೋರಿಸುವ ವಿಚಾರಕ್ಕೆ ಕಿರಿಕ್ ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಕಿರಿಕ್ ನಡೆದಿತ್ತು. ಈ ವಿಚಾರಕ್ಕೆ ಕಂಡಕ್ಟರ್ ಸಂಗಪ್ಪ ಮೇಲೆ ಸಿಟ್ಟಿಗೆದ್ದ ಪ್ರಯಾಣಿಕ ಕಲ್ಲು ಹೊಡೆದು ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.