ಚಂಡೀಗಡ: ಅಶ್ಲೀಲ ವಿಡಿಯೋ ನೋಡುವುದನ್ನು ರೂಢಿಸಿಕೊಂಡಿದ್ದ ಪತ್ನಿ ಅದೇ ರೀತಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸುತ್ತಿದ್ದರಿಂದ ನೊಂದ ಪತಿರಾಯ ವಿಚ್ಛೇದನ ನೀಡಿದ್ದಾನೆ.
ಅಶ್ಲೀಲ ವಿಡಿಯೋ ಚಟಗಳ ಚಟಕ್ಕೆ ಬಿದ್ದ ಪತ್ನಿಯ ಲೈಂಗಿಕ ಒತ್ತಾಸೆಗೆ ಬೇಸತ್ತು ಪತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ತೀರ್ಪು ನೀಡಿದ್ದು, ಅದರ ವಿರುದ್ಧ ಪತ್ನಿ ಪಂಜಾಬ್ –ಹರಿಯಾಣ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
2017ರಲ್ಲಿ ಮದುವೆಯಾಗಿರುವ ಹರಿಯಾಣದ ದಂಪತಿ ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ನಂತರ ಪತ್ನಿ ಮೊಬೈಲ್ ಗೇಮ್ಸ್, ಪೋರ್ನ್ ವಿಡಿಯೋ ವ್ಯಸನಿಯಾಗಿದ್ದು, ಅಸಹಜ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಕಿರುಕುಳ ನೀಡುತ್ತಿದ್ದಳು. ಹೀಗಾಗಿ ಪತ್ನಿಯಿಂದ ವಿಚ್ಛೇದನ ಕೊಡಬೇಕೆಂದು ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಪತಿಯ ಮನವಿ ಪರಿಶೀಲಿಸಿದ ಕೌಟುಂಬಿಕ ನ್ಯಾಯಾಲಯ ಜುಲೈನಲ್ಲಿ ವಿಚ್ಛೇದನ ನೀಡಿದೆ. ಇದರ ವಿರುದ್ಧ ಪತ್ನಿ ಪಂಜಾಬ್ -ಹರಿಯಾಣ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ಜಸ್ಬಿಂತ್ ಬೇಡಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ವಿಚ್ಛೇದನ ನೀಡಿರುವ ಕೌಟುಂಬಿಕ ನ್ಯಾಯಾಲಯದ ತೀರ್ಪು ಸರಿಯಾಗಿದೆ ಎಂದು ಆದೇಶಿಸಿದೆ.