BREAKING : ಬೆಂಗಳೂರಿನ ‘ಕೆಂಗೇರಿ’ ಕೆರೆಯಲ್ಲಿ ನಾಪತ್ತೆಯಾಗಿದ್ದ ಅಣ್ಣನ ಮೃತದೇಹ ಪತ್ತೆ, ತಂಗಿಗಾಗಿ ಮುಂದುವರೆದ ಶೋಧ..!

ಬೆಂಗಳೂರಿನ ಕೆಂಗೇರಿ ಕೆರೆಯಲ್ಲಿ ನಾಪತ್ತೆಯಾಗಿದ್ದ ಅಣ್ಣ ಜಾನ್ ಸೀನಾ  ಶವ ಪತ್ತೆಯಾಗಿದೆ.

ಬೆಂಗಳೂರಿನ ‘ಕೆಂಗೇರಿ’ ಕೆರೆಯಲ್ಲಿ ನಾಪತ್ತೆಯಾಗಿದ್ದ ಅಣ್ಣನ ಮೃತದೇಹ ಪತ್ತೆಯಾಗಿದ್ದು, ತಂಗಿಗಾಗಿ ಶೋಧ ಮುಂದುವರೆದಿದೆ.

ಆಟವಾಡುವಾಗ ಅಣ್ಣ, ತಂಗಿ ಆಯತಪ್ಪಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ವರ್ಷಾ ಲೇಔಟ್ ನ ಜಯಮ್ಮ ಎಂಬುವರ ಮಕ್ಕಳಾದ ಜಾನ್ಸನ್(13), ಮಹಾಲಕ್ಷ್ಮಿ(11) ಕೆರೆಗೆ ಬಿದ್ದ ಅಣ್ಣ, ತಂಗಿಯಾಗಿದ್ದಾರೆ. ಸೋಮವಾರ ಸಂಜೆ 5:30ಕ್ಕೆ ಕೆಂಗೇರಿ ಬಸ್ ನಿಲ್ದಾಣ ಎದುರಿನ ಕೆರೆಯಲ್ಲಿ ಘಟನೆ ನಡೆದಿದೆ.
ಇದೀಗ ಜಾನ್ ಸೀನನ ಶವ ಪತ್ತೆಯಾಗಿದೆ.

ಜಾನ್ಸನ್ ಮತ್ತು ಮಹಾಲಕ್ಷ್ಮಿ ಕೆರೆಯ ವಾಕಿಂಗ್ ಪಾತ್ ನಲ್ಲಿ ಆಟವಾಡುತ್ತಿದ್ದಾಗ ಕೆರೆಗೆ ಬಿದ್ದ ಬಿಂದಿಗೆ ಎತ್ತಿಕೊಳ್ಳಲು ಮಹಾಲಕ್ಷ್ಮಿ ಕೆಳಗೆ ಇಳಿದಿದ್ದು, ಆಯತಪ್ಪ ನೀರಲ್ಲಿ ಬಿದ್ದಿದ್ದಾಳೆ. ತಂಗಿ ಮುಳುಗುವುದನ್ನು ಕಂಡ ಜಾನ್ಸನ್ ಕೂಡ ರಕ್ಷಣೆಗೆ ಮುಂದಾಗಿದ್ದು, ಈ ವೇಳೆ ಆತನೂ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.ಮಾಹಿತಿ ತಿಳಿದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಇಬ್ಬರು ಮಕ್ಕಳಿಗಾಗಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read