ಸಾಮಾನ್ಯವಾಗಿ ಇತ್ತೀಚೆಗೆ ವಾಟ್ಸಾಪ್ ಬಳಕೆದಾರರು ಬಹುತೇಕವಾಗಿ ಸಂದೇಶ ಬರೆಯುವುದಕ್ಕಿಂತ ಹೆಚ್ಚಾಗಿ ಎಮೋಜಿಗಳ ಮೇಲೆ ಅವಲಂಭಿತರಾಗುತ್ತಾರೆ. ಆಧುನಿಕ ಯುಗದ ಭರಾಟೆಯೇ ಹಾಗೇ…. ಬದುಕಲ್ಲಿ ಯಾರಿಗೂ ಸಮಯವೂ ಇಲ್ಲ, ಸಹನೆಯೂ ಇಲ್ಲ. ಅದಕ್ಕೆ ತಕ್ಕಂತೆ ತಂತ್ರಜ್ಞಾನಗಳು ಸಾಕಷ್ಟು ಬದಲಾವಣೆಯೊಂದಿಗೆ ಅಂಗೈಯಲ್ಲೇ ಸೌಲಭ್ಯ ಸಿಗುವಷ್ಟರ ಮಟ್ಟುಗೆ ಸುಧಾರಣೆಗಳನ್ನು ತಂದಿದೆ. ನಾವು ಕಾಲಕಾಲಕ್ಕೆ ಅಪ್ ಡೇಟ್ ಆಗುತ್ತಾ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಾ ಮುಂದಡಿಯಿಡುತ್ತಿರಬೇಕು ಅಷ್ಟೇ.
ಇಂದು ಮೆಸೇಜ್ ಗಳನ್ನು ಟೈಪ್ ಮಾಡುವ ಬದಲು ಬಹುತೇಕರು ಎಮೋಜಿಗಳನ್ನು ಸೆಂಡ್ ಮಾಡುವ ಮೂಲಕ ಸಂಭಾಷಣೆ ನಡೆಸುವುದು ಸಾಮಾನ್ಯವಾಗಿದೆ. ಈಗ ಎಲ್ಲವೂ ವೇಗವಾಗಿ ಹಾಗೂ ತಕ್ಷಣವೇ ಅಗಬೇಕು… ಉದ್ದುದ್ದದ ಮೆಸೇಜ್ ಟೈಪ್ ಮಾಡುತ್ತಾ ಇರಲು ಯಾರಿಗೂ ಟೈಮ್ ಇಲ್ಲ. ಹಾಗೇ ಟೈಪ್ ಮಾಡಿದ ಸಂದೇಶವನ್ನು ಪೂರ್ತಿಯಾಗಿ ಓದುವಷ್ಟು ಸಹನೆಯೂ ಕಡಿಮೆ.. ಹಾಗಾಗಿ ಎಮೋಜಿ ಮೊರೆ ಹೋಗುವವರೇ ಹೆಚ್ಚು.
ಆದರೆ ಕೆಲವರಿಗೆ ಯಾವ ಎಮೋಜಿಗೆ ಯಾವ ಅರ್ಥ ಎಂಬುದು ಗೊತ್ತಿರುವುದಿಲ್ಲ. ಕೆಲ ಸಾಮಾನ್ಯ ಎಮೋಜಿಗಳ ಬಗ್ಗೆ ಅರ್ಥವಾಗುತ್ತದೆ ಆದರೆ ಕೆಲವು ಎಮೋಜಿಗಳು ಗೊಂದಲವನ್ನುಂಟು ಮಾಡುತ್ತವೆ. ಇಂತಹ ಗೊಂದಲಗಳಿಗೆ ಪರಿಹಾರವಾಗಿ ಇಲ್ಲಿದೆ ಎಲ್ಲಾ ಎಮೋಜಿಗಳ ಅರ್ಥವೇನು ಎಂಬ ಬಗ್ಗೆ ಚಿತ್ರ ಸಹಿತವಾದ ಮಾಹಿತಿ.