HomeKarnatakaಪಡಿತರ ಚೀಟಿದಾರರ ಗಮನಕ್ಕೆ : ಆಹಾರ ಧಾನ್ಯ ವಿತರಣೆ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಪಡಿತರ ಚೀಟಿದಾರರ ಗಮನಕ್ಕೆ : ಆಹಾರ ಧಾನ್ಯ ವಿತರಣೆ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪಡಿತರ ವಿತರಣೆ ಕಾರ್ಯವನ್ನು ಈ ಹಿಂದೆ ಎನ್ಐಸಿ ತಂತ್ರಾಂಶದಿಂದ ನಿರ್ವಹಿಸಲಾಗುತ್ತಿತ್ತು.

ಆದರೆ ರಾಜ್ಯಾದ್ಯಂತ ಅಕ್ಟೋಬರ ಮಾಹೆಯಿಂದ ಎನ್ಐಸಿ ತಂತ್ರಾಂಶದಿಂದ ಬೇರ್ಪಡಿಸಿ ಕರ್ನಾಟಕ ಸ್ಟೇಟ್ ಡೆಟಾ ಸೆಂಟರ್ (ಕೆಎಸ್ಡಿಸಿ) ನಿಂದ ಪಡಿತರ ವಿತರಣೆ ಕಾರ್ಯವನ್ನು ನಿರ್ವಹಿಸುತ್ತಿರುವುದರಿಂದ ಸರ್ವರ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರ್ವರ್ ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಈಗಾಗಲೇ ಕೇಂದ್ರ ಕಛೇರಿಯ ಗಮನಕ್ಕೆ ತರಲಾಗಿದ್ದು, ಕಾರ್ಡುದಾರರು ಆಂತಕಪಡುವ ಅಗತ್ಯವಿಲ್ಲ.

ಅಕ್ಟೋಬರ-2024ನೇ ಮಾಹೆಯ ಪಡಿತರ ವಿತರಣೆಯನ್ನು ನಿಗದಿತ ಅವಧಿಯೊಳಗಾಗಿ ಕಾರ್ಡುದಾರರಿಗೆ ವಿತರಿಸಲಾಗುವದು. ಆದ್ದರಿಂದ ಕಾರ್ಡುದಾರರು ಆತಂಕಕ್ಕೆ ಒಳಗಾಗಬಾರದೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular