alex Certify SHOCKING: ಪೋಷಕರೇ ಗಮನಿಸಿ: ಮನೆ ಬಳಿ ಆಟವಾಡುತ್ತಿದ್ದ ಮೂವರು ಹೆಣ್ಣುಮಕ್ಕಳು ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಪೋಷಕರೇ ಗಮನಿಸಿ: ಮನೆ ಬಳಿ ಆಟವಾಡುತ್ತಿದ್ದ ಮೂವರು ಹೆಣ್ಣುಮಕ್ಕಳು ನಾಪತ್ತೆ

ಬೆಂಗಳೂರು: ಮನೆಯ ಬಳಿ ಆಟವಾಡುತ್ತಿದ್ದ ಮೂವರು ಹೆಣ್ಣು ಮಕ್ಕಳು ನಾಪತ್ತೆಯಾದ ಘಟನೆ ಬೆಂಗಳೂರಿನ ಮರಿಯಪ್ಪನ ಪಾಳ್ಯದಲ್ಲಿ ನಡೆದಿದೆ.

ಸಂಜೆ 4:30 ರಿಂದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪನ ಪಾಳ್ಯದ ಮೂವರು ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಹರ್ಷಿತಾ(3), ನಿಶ್ವಿಕಾ(6), ರಶ್ಮಿಕಾ(10) ನಾಪತ್ತೆಯಾದ ಮಕ್ಕಳು ಎಂದು ಹೇಳಲಾಗಿದೆ.

ಮನೆಯಿಂದ ಹೊರಗೆ ಬಂದು ಆಟವಾಡುತ್ತಿದ್ದ ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಮೂವರು ಮಕ್ಕಳ ಪೋಷಕರು ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...