ರಾಯಚೂರು: ಫೀಸ್ ಕಟ್ಟಲು ವಿಳಂಬವಾದರೆ ಬಡ್ಡಿ ಕಟ್ಟುವಂತೆ ಹೇಳಿ ಕಾಲೇಜು ಆಡಳಿತಾಧಿಕಾರಿ ಕಿರುಕುಳ ನೀಡಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೆಪಿಎಸ್ ವಿ ಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
ಕಾಲೇಜು ಆಡಳಿತಾಧಿಕಾರಿ ಉಮಾಶಂಕರ್ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ಕಾಲೇಜು ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಉಮಾಶಂಕರ್, ಕಾಲೇಜು ಪೀಸ್ ಕಟ್ಟಲು ವಿಳಂಬವಾದರೆ ಬಡ್ಡಿಕಟ್ಟುವಂತೆ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಬಡ್ಡಿ ಕಟ್ಟದಿದ್ದರೆ ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಆಡಳಿತಾಧಿಕರಿ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಲ್ಲದೇ ಉಮಾಶಂಕರ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದ್ದು, ಪೋಷಕರು ಕಾಲೇಜಿಗೆ ದೌಡಾಯಿಸಿದ್ದಾರೆ.
ಬಯೋಮೆಟ್ರಿಕ್ ನೀಡದೇ ವಿದ್ಯಾರ್ಥಿಗಳಿಗೆ ಆಡಳಿತಾಧಿಕಾರಿ ಉಮಾಶಂಕರ್ ಕಿರುಕುಳ ನೀಡಿದ್ದಾರೆ ಅಲ್ಲದೇ ವಿದ್ಯಾರ್ಥಿನಿಯರನ್ನು ಕೆಟ್ಟದಾಗಿ ನಿಂದಿಸುತ್ತಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿದು ವಿದ್ಯಾರ್ಥಿನಿಯರ ಪೋಷಕರು ಕಾಲೇಜಿಗೆ ಆಗಮಿಸಿದ್ದು, ಆಡಳಿತಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಆಂಧ್ರಪ್ರದೇಶ, ಮಹಾರಾಷ್ಟ್ರ ಸೆರಿದಂತೆ ವಿವಿಧ ರಾಜ್ಯಗಳಿಂದ ಕಾಲೇಜಿಗೆ ಆಗಮಿಸಿರುವ ವಿದ್ಯಾರ್ಥಿನಿಯರ ಪೋಷಕರುಬಡ್ಡಿ ಹಣ ಹಿಂತಿರುಗಿಸುವಂತೆ ಆಗ್ರಹಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರ ಪೋಷಕರು ಹಾಗೂ ಕಾಲೇಜು ಸಿಬ್ಬಂದಿಗಳ ನಡುವೆ ಗಲಾಟೆ ನಡೆದಿದ್ದು, ಘಟನಾ ಸ್ಥಳಕ್ಕೆ ಮಾನ್ವಿ ಡಿವೈಎಸ್ ಪಿ, ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.