ಬೆಂಗಳೂರು : ಆಸ್ತಿ ನೋಂದಣಿಗಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಕ್ಟೋಬರ್ನಲ್ಲಿ ದಿನ ನಿಗದಿಪಡಿಸಿಕೊಂಡವರಿಗಾಗಿ ಒಂದು ಅಥವಾ ಎರಡು ದಿನದಲ್ಲಿ ಇ – ಖಾತಾ ನೀಡಲು ಬಿಬಿಎಂಪಿ ಅವಕಾಶ ಕಲ್ಪಿಸಿದೆ.
ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದರೆ ಕೂಡಲೇ ಇ – ಖಾತಾ ಮಾಡಿಕೊಡಲು ಎಲ್ಲ ಸಹಾಯಕ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಆಸ್ತಿ ನೋಂದಣಿಯ ಉದ್ದೇಶವಿಲ್ಲದವರು ಅಂತಿಮ ಇ-ಖಾತಾ ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. ಆನ್ಲೈನ್ನಲ್ಲೇ ಯಾವಾಗ ಬೇಕಾದರೂ ಅಂತಿಮ ಇ – ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಋುಣಭಾರ ಪ್ರಮಾಣಪತ್ರದ (ಇಸಿ) ಅಗತ್ಯವಿಲ್ಲಎಂದು ಹೇಳಿದ್ದಾರೆ.