ಬೆಂಗಳೂರು : ಅ. 29ರಂದು ಬೆಂಗಳೂರಿನಲ್ಲಿ ʼಗ್ರಾಮೀಣ ನೀರು ಮತ್ತು ನೈರ್ಮಲ್ಯ ಸುಸ್ಥಿರತೆʼಯ ಶೃಂಗಸಭೆ ನಡೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಗ್ರಾಮೀಣ ಭಾಗ ಎದುರಿಸುತ್ತಿರುವ ಕುಡಿಯುವ ನೀರು, ನೈರ್ಮಲ್ಯದ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಕ್ಟೋಬರ್ 29ರಂದು ಬೆಂಗಳೂರಿನಲ್ಲಿ ʼಗ್ರಾಮೀಣ ನೀರು ಮತ್ತು ನೈರ್ಮಲ್ಯ ಸುಸ್ಥಿರತೆʼಯ ಶೃಂಗಸಭೆ ಆಯೋಜಿಸಲಾಗುತ್ತಿದೆ. ಆಯ್ಕೆಯಾದ ಸ್ಟಾರ್ಟ್ಅಪ್ಗಳ ಪ್ರದರ್ಶನವಿದ್ದು, ವಿಜೇತರಿಗೆ ಕನಿಷ್ಠ 25 ಲಕ್ಷ ರೂ. ವರೆಗೆ ಧನಸಹಾಯ ನೀಡಲಾಗುವುದು. ಕರ್ನಾಟಕವನ್ನು ದೇಶದಲ್ಲಿ ಜಲ ಭದ್ರತೆ ಹೊಂದಿದ ರಾಜ್ಯವನ್ನಾಗಿಸುವ ಗುರಿ ನಮ್ಮದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.