ಬಿಹಾರದಲ್ಲಿ ಕಳ್ಳಭಟ್ಟಿ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ 20 ಕ್ಕೇರಿಕೆಯಾಗಿದೆ.
ಸಿವಾನ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದ್ದು, ಮೊದಲು 7 ಮಂದಿ ಮೃತಪಟ್ಟಿದ್ದರು. ಇದೀಗ ಮೃತರ ಸಂಖ್ಯೆ 20 ಕ್ಕೇರಿಕೆಯಾಗಿದೆ.
ಮಂಗಳವಾರ ರಾತ್ರಿ ಅಂಗಡಿಯೊಂದರಲ್ಲಿ ಮಾರಾಟವಾಗಿದ್ದ ಅಕ್ರಮ ಮದ್ಯ ಸೇವಿಸಿದ ಹಲವರಿಗೆ ಹೊಟ್ಟೆನೋವು ವಾಕರಿಕೆ ಕಾಣಿಸಿಕೊಂಡಿತ್ತು. ಮಾಧಾರ್ ಗ್ರಾಮದ ಅಂಗಡಿಯಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ ಒಟ್ಟು 20 ಮಂದಿ ಮೃತಪಟ್ಟಿದ್ದಾರೆ.