alex Certify ALERT : ಗಂಟೆಗಟ್ಟಲೇ ಇಯರ್ ಫೋನ್ ಬಳಸ್ತೀರಾ : ಈ ಗಂಭೀರ ಕಾಯಿಲೆಗಳು ಬರುತ್ತೆ ಎಚ್ಚರ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ಗಂಟೆಗಟ್ಟಲೇ ಇಯರ್ ಫೋನ್ ಬಳಸ್ತೀರಾ : ಈ ಗಂಭೀರ ಕಾಯಿಲೆಗಳು ಬರುತ್ತೆ ಎಚ್ಚರ.!

ಮೊಬೈಲ್ ಫೋನ್ನಲ್ಲಿ ಮಾತನಾಡುವ ವಳೆ ಇಲ್ಲವೇ ತಮ್ಮಿಷ್ಟದ ಸಂಗೀತವನ್ನ ಕೇಳುವ ವೇಳೆ ಇಯರ್ಫೋನ್ಗಳನ್ನ ಬಳಕೆ ಮಾಡೋದು ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಅದರಲ್ಲೂ ಯುವ ಜನತೆಯಂತೂ ದಿನದಲ್ಲಿ ಹೆಚ್ಚು ಬಾರಿ ಇಯರ್ಫೋನ್ಗಳನ್ನ ಕಿವಿಗೆ ಸಿಕ್ಕಿಸಿಕೊಂಡೇ ತಿರುಗ್ತಾ ಇದ್ದಾರೆ.

ಬಹುಶಃ ನಿಮಗೂ ಕೂಡ ಈ ಅಭ್ಯಾಸ ಇದ್ದಿರಬಹುದು. ಒಂದು ವೇಳೆ ನೀವು ಕೂಡ ಇಯರ್ ಫೋನ್ಗಳನ್ನ ಸಿಕ್ಕಾಪಟ್ಟೆ ಬಳಕೆ ಮಾಡುವವರ ಪೈಕಿಗೆ ಸೇರಿದ್ದರೆ ನೀವು ಈ ಸ್ಟೋರಿಯನ್ನ ಓದಲೇಬೇಕು. ಯಾಕಂದರೆ ಇಯರ್ ಫೋನ್ಗಳನ್ನ ಅತಿ ಹೆಚ್ಚು ಸಮಯ ಬಳಕೆ ಮಾಡೋದ್ರಿಂದ ನಿಮ್ಮ ಕಿವಿಯ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಿದೆ. ಇದು ನಿಮ್ಮನ್ನ ಶಾಶ್ವತ ಕಿವುಡರನ್ನಾಗಿ ಮಾಡಲೂಬಹುದು.

ಸೋಂಕು ತಗಲುವ ಸಾಧ್ಯತೆ

ಬಹಳ ಸಮಯದವರೆಗೆ ಇಯರ್ ಫೋನ್ಗಳನ್ನ ಕಿವಿಗೆ ಹಾಕಿಕೊಂಡೇ ಇರೋದ್ರಿಂದ ಕಿವಿಯಲ್ಲಿ ಸೋಂಕು ಉಂಟಾಗಬಹುದು. ಹೀಗಾಗಿ ಯಾರ ಜೊತೆಯಾದರು ನೀವು ಇಯರ್ ಫೋನ್ ಹಂಚಿಕೊಳ್ಳುವ ಅಭ್ಯಾಸ ಹೊಂದಿದ್ದರೆ ಪ್ರತಿ ಬಾರಿ ಇಯರ್ ಫೋನ್ ಬಡ್ಗೆ ಸ್ಯಾನಿಟೈಸರ್ ಹಾಕಲು ಮರೆಯದಿರಿ.

ಕಿವುಡತನ ಉಂಟಾಗುವ ಸಾಧ್ಯತೆ

ಇಯರ್ ಫೋನ್ ಗಳನ್ನ ದಿನವಿಡಿ ಬಳಕೆ ಮಾಡೋದ್ರಿಂದ ಶ್ರವಣ ಸಾಮರ್ಥ್ಯ 40 ರಿಂದ 50 ಡೆಸಿಬಲ್ವರೆಗೆ ಕಡಿಮೆಯಾಗಬಹುದು. ಕಿವಿಯ ಪರದೆ ವೈಬ್ರೇಟ್ ಆಗಲು ಶುರುವಾಗುತ್ತೆ. ದೂರದ ಶಬ್ದಗಳು ನಿಮಗೆ ಕೇಳದೆಯೂ ಇರಬಹುದು. ಅಲ್ಲದೇ ಶಾಶ್ವತ ಕಿವುಡುತನ ಕೂಡ ಉಂಟಾಗಬಹುದು.

ಮಾನಸಿಕ ಸಮಸ್ಯೆ

ದೊಡ್ಡ ಧ್ವನಿಯಲ್ಲಿ ಹಾಡುಗಳನ್ನ ಕೇಳೋದ್ರಿಂದ ಮಾನಸಿಕ ಸಮಸ್ಯೆ, ಹೃದ್ರೋಗ ಹಾಗೂ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ.

ಮೆದುಳಿನ ಮೇಲೆ ದುಷ್ಪರಿಣಾಮ: ದೀರ್ಘಕಾಲದವರೆಗೆ ಇಯರ್ ಫೋನ್ ಗಳನ್ನ ಬಳಕೆ ಮಾಡೋದ್ರಿಂದ ಮೆದುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದು. ಈ ಎಲ್ಲಾ ಗಂಭೀರ ಪರಿಣಾಮಗಳಿಂದ ಪಾರಾಗಲು ಇಯರ್ ಫೋನ್ಗಳ ಬಳಕೆ ಆದಷ್ಟು ಕಡಿಮೆ ಮಾಡಿ.

ಇಯರ್ ಫೋನ್ ಹೆಚ್ಚು ಬಳಸುವುದರಿಂದ ಆಗುವ ಪರಿಣಾಮಗಳು

ಅವುಗಳನ್ನು ಬಳಸುವುದರಿಂದ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಬಹಳಷ್ಟು ಇಯರ್ ಫೋನ್ ಗಳ ಧ್ವನಿಯನ್ನು ಹೊಂದಿರುವ ಮತ್ತು ಶ್ರವಣ ಸಮಸ್ಯೆಗಳನ್ನು ಹೊಂದಿರುವ ಹಾಡುಗಳನ್ನು ಅನೇಕ ಜನರು ಕೇಳುತ್ತಾರೆ. ವರದಿಯ ಪ್ರಕಾರ, ಶ್ರವಣ ಸಮಸ್ಯೆಗೆ ಮುಖ್ಯ ಕಾರಣ ಇಯರ್ ಫೋನ್ ಗಳ ಅತಿಯಾದ ಬಳಕೆ. ಅವುಗಳನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಸಮಸ್ಯೆ ಹೆಚ್ಚಾಗುತ್ತಲೇ ಇರುತ್ತದೆ. ಇಯರ್ ಫೋನ್ ಗಳ ಅತಿಯಾದ ಬಳಕೆಯಿಂದಾಗಿ ಪ್ರಸ್ತುತ ದಿನಗಳಲ್ಲಿ ನಾಲ್ಕು ಜನರು ಶ್ರವಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದೂ ಸಹ ಯುವಕರಲ್ಲಿ ಸಮಸ್ಯೆ ಹೆಚ್ಚು ಗಂಭೀರವಾಗುತ್ತಿದೆ.

ಕಿವಿಯಲ್ಲಿ ತುರಿಕೆ ಅಥವಾ ಸ್ವಲ್ಪ ನೋವು ಮುಂತಾದ ಸಮಸ್ಯೆಗಳ ಚಿಹ್ನೆಗಳು ಇದ್ದರೆ, ಅವುಗಳನ್ನು ಶ್ರವಣ ಸಮಸ್ಯೆಗಳ ಮೊದಲ ಲಕ್ಷಣವೆಂದು ಕರೆಯಬಹುದು. ಇತ್ತೀಚಿನ ಹೈಟೆಕ್ ಇಯರ್ ಫೋನ್ ಗಳು ಉತ್ತಮಗೊಳ್ಳುವ ಅಪಾಯವಿಲ್ಲ ಎಂದು ಹೇಳಲಾಗುತ್ತದೆ. ನೀವು ಕಡ್ಡಾಯ ಪರಿಸ್ಥಿತಿಗಳಲ್ಲಿ ಇಯರ್ ಫೋನ್ ಗಳನ್ನು ಬಳಸಬೇಕಾದರೆ, ಪ್ರತಿ 30 ನಿಮಿಷಗಳಿಗೊಮ್ಮೆ ಕನಿಷ್ಠ 10 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು ನಂತರ ಅವುಗಳನ್ನು ಬಳಸುವುದು ಸೂಕ್ತ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...