HomeCrimeWatch Video | ಯುವತಿಯರಂತೆ ವೇಷ ಧರಿಸಿ ಎಟಿಎಂ ಕಳ್ಳತನ ಯತ್ನ; ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ

Watch Video | ಯುವತಿಯರಂತೆ ವೇಷ ಧರಿಸಿ ಎಟಿಎಂ ಕಳ್ಳತನ ಯತ್ನ; ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ

ಗುರುವಾರ ತಡರಾತ್ರಿ ಮಧ್ಯಪ್ರದೇಶದ ಉಜ್ಜಯಿನಿಯ ಫಜಲ್‌ಪುರ ಪ್ರದೇಶದಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದ ಎಟಿಎಂಗೆ ಮಹಿಳೆಯರಂತೆ ವೇಷ ಧರಿಸಿದ್ದ ಇಬ್ಬರು ಯುವಕರು ನುಗ್ಗಲು ಯತ್ನಿಸಿದ್ದಾರೆ.

ಎಟಿಎಂ ಬೂತ್‌ನಲ್ಲಿದ್ದ ಸಿಸಿ ಟಿವಿಯಲ್ಲಿ ದಾಖಲಾಗಿರುವ ಈ ಘಟನೆಯಲ್ಲಿ ದುಷ್ಕರ್ಮಿಗಳು ಮುಖಕ್ಕೆ ದುಪ್ಪಟ್ಟಾವನ್ನು ಹಾಕಿದ್ದು, ತಮ್ಮ ಗುರುತನ್ನು ಮರೆಮಾಚಲು ಕ್ಯಾಮರಾ ಮೇಲೆ ಸ್ಪ್ರೇ ಮಾಡುತ್ತಿರುವುದು ಕಂಡುಬಂದಿದೆ.

ಎಟಿಎಂನ ಸೈರನ್ ಮೊಳಗಿದಾಗ ಅವರ ಯೋಜನೆ ವಿಫಲವಾಗಿದ್ದು, ಅವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಚಿಮಂಗಂಜ್ ಮಂಡಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಶಂಕಿತರ ವಿಚಾರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular