alex Certify 40 ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಶಿಕ್ಷಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

40 ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಶಿಕ್ಷಕ ಅರೆಸ್ಟ್

ತಮಿಳುನಾಡಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 40 ಕ್ಕೂ ಆಧಿಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನೊಬ್ಬನನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ ವಿವಿಧ ಕಲಂ ಗಳಡಿ ಪ್ರಕರಣ ದಾಖಲಿಸಲಾಗಿದೆ.

ತಂಜಾವೂರು ಜಿಲ್ಲೆಯ ಪಪ್ಪನಾಡು ಪ್ರದೇಶದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 42 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 35 ವರ್ಷದ ಗಣಿತ ಶಿಕ್ಷಕ ಬಿ. ಮುತ್ತುಕುಮಾರನ್ ನನ್ನು ಬಂಧಿಸಲಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳ ಸರಣಿ ದೂರಿನ ಮೇರೆಗೆ ಅಕ್ಟೋಬರ್ 9 ರಂದು ಒರತನಾಡು ಪೊಲೀಸರು ಶಿಕ್ಷಕನನ್ನು ವಶಕ್ಕೆ ಪಡೆದಿದ್ದರು.

2024ರ ಆಗಸ್ಟ್ 12 ರಂದು IX ಮತ್ತು X ತರಗತಿಗಳಲ್ಲಿ ಓದುತ್ತಿರುವ ಹಲವಾರು ಹುಡುಗಿಯರ ಪೋಷಕರು ಮುತ್ತುಕುಮಾರನ್ ಅವರ ದುರ್ವರ್ತನೆಯನ್ನು ವರದಿ ಮಾಡಲು ಮಕ್ಕಳ ಸಹಾಯವಾಣಿ (1098) ಯನ್ನು ಸಂಪರ್ಕಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಬಳಿಕ, ಮಕ್ಕಳ ಸಹಾಯವಾಣಿಯ ಅಧಿಕಾರಿಗಳು ಆಗಸ್ಟ್ 13 ರಂದು ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಈ ವೇಳೆ ಅನೇಕ ವಿದ್ಯಾರ್ಥಿನಿಯರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ವಿವರಿಸಿದ್ದಾರೆ.

ಈ ವಿಚಾರಣೆಯ ನಂತರ, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮುಖ್ಯ ಶಿಕ್ಷಣಾಧಿಕಾರಿಗಳಿಗೆ ವಿವರವಾದ ವರದಿಯನ್ನು ಸಲ್ಲಿಸಿದ್ದು, ಇದರ ಪರಿಣಾಮವಾಗಿ, ಮುತ್ತುಕುಮಾರನ್ ನನ್ನು ಆಗಸ್ಟ್ 14 ರಂದು ಅಮಾನತುಗೊಳಿಸಲಾಗಿತ್ತು. ಆದರೆ, ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳದ ಕಾರಣ ಪೋಷಕರು ಅಕ್ಟೋಬರ್ 9 ರಂದು ಪ್ರತಿಭಟನೆಯನ್ನು ನಡೆಸಿದ್ದರು.

ನಂತರ ಮಕ್ಕಳ ಸಹಾಯವಾಣಿಯ ಅಧಿಕಾರಿಯೊಬ್ಬರು ಒರತನಾಡು ಮಹಿಳಾ ಪೊಲೀಸ್ ಠಾಣೆಗೆ ಔಪಚಾರಿಕವಾಗಿ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಮುತ್ತುಕುಮಾರನ್ ನನ್ನು ಬಂಧಿಸಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಆತನನ್ನು ಒರತನಾಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪುದುಕ್ಕೊಟ್ಟೈ ಜೈಲಿಗೆ ಕಳುಹಿಸಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...