HomeIndiaಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜೀನಾಮೆ...! ಇದರ ಹಿಂದಿತ್ತು ಒಂದು 'ಕಾರಣ'

ಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜೀನಾಮೆ…! ಇದರ ಹಿಂದಿತ್ತು ಒಂದು ‘ಕಾರಣ’

ಪ್ರಸ್ತುತ ಉದ್ಯೋಗ ಸಿಗುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಅಂತದ್ದರಲ್ಲಿ ಯುವಕನೊಬ್ಬ ತನಗೆ ಸಿಕ್ಕಿದ್ದ ಉತ್ತಮ ಉದ್ಯೋಗವನ್ನು ಸೇರ್ಪಡೆಗೊಂಡ ಮೊದಲ ದಿನವೇ ತ್ಯಜಿಸಿದ್ದಾನೆ. ಇದಕ್ಕೆ ಈತ ನೀಡಿದ ಕಾರಣದ ಇ-ಮೇಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಾಡಕ್ಟ್ ಡಿಸೈನರ್ ಹುದ್ದೆಗೆ ಆಯ್ಕೆಯಾಗಿದ್ದ ಈ ಯುವಕ ಮೊದಲ ದಿನ ಖುಷಿ ಖುಷಿಯಿಂದಲೇ ರಿಪೋರ್ಟ್ ಮಾಡಿಕೊಂಡಿದ್ದಾನೆ. ಆದರೆ ಆತನ ಉದ್ಯೋಗದಾತ ಆರಂಭದಿಂದಲೇ ಕಿರಿಕಿರಿ ಆರಂಭಿಸಿದ್ದು, ಜೊತೆಗೆ ಉದ್ಯೋಗಿಯ ಕೆಲವೊಂದು ನಡೆಯ ಕುರಿತು ಉಪದೇಶ ಕೊಡಲು ಹೋಗಿದ್ದಾನೆ.

ಇದೆಲ್ಲದರಿಂದ ಬೇಸತ್ತ ಉದ್ಯೋಗಿ ಅಂದು ಸಂಜೆಯೇ ರಾಜೀನಾಮೆ ನೀಡಿದ್ದು, ಇದಕ್ಕಾಗಿ ಆತ ತನ್ನ ಉದ್ಯೋಗದಾತನಿಗೆ ಕಳುಹಿಸಿದ ಇ ಮೇಲ್ ವೈರಲ್ ಆಗಿದೆ. ಅದರಲ್ಲಿ ಮೊದಲ ದಿನವೇ ತಾನನುಭವಿಸಿದ ಕಿರಿಕಿರಿಯನ್ನು ಉದ್ಯೋಗಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

Man quits job after one day at work, says toxic boss ridiculed 'the concept of work-life balance'

For Latest News Updates, Join Our Whatsapp Community🚩
RELATED ARTICLES

Most Popular