HomeEntertainmentಐಶ್ವರ್ಯ - ಅಭಿಷೇಕ್ ಡೈವೋರ್ಸ್ ವದಂತಿ ಬೆನ್ನಲ್ಲೇ ಪತಿ ಮೇಲೆ ಮುನಿಸಿಕೊಂಡ ಹಳೆ 'ವಿಡಿಯೋ ವೈರಲ್'

ಐಶ್ವರ್ಯ – ಅಭಿಷೇಕ್ ಡೈವೋರ್ಸ್ ವದಂತಿ ಬೆನ್ನಲ್ಲೇ ಪತಿ ಮೇಲೆ ಮುನಿಸಿಕೊಂಡ ಹಳೆ ‘ವಿಡಿಯೋ ವೈರಲ್’

ಅಭಿಷೇಕ್ ತಂದೆ ಅಮಿತಾಬ್ ಬಚ್ಚನ್, ತಾಯಿ ಜಯಾ ಬಚ್ಚನ್ ಹಾಗೂ ಸಹೋದರಿ ಶ್ವೇತಾ ನಂದಾ ಜೊತೆ ಈ ವಿವಾಹ ಸಮಾರಂಭಕ್ಕೆ ಆಗಮಿಸಿದ್ದರೆ, ಐಶ್ವರ್ಯಾ ರೈ ತಮ್ಮ ಪುತ್ರಿ ಆರಾಧ್ಯ ಬಚ್ಚನ್ ಜೊತೆ ಬಂದಿದ್ದರು. ಈ ಸಮಾರಂಭದಲ್ಲಿ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಈ ಎಲ್ಲ ವಿದ್ಯಮಾನ ಇವರಿಬ್ಬರೂ ಪ್ರತ್ಯೇಕವಾಗಲು ಬಯಸಿದ್ದಾರೆ ಎಂಬ ವದಂತಿಗಳಿಗೆ ಪುಷ್ಟಿ ನೀಡುವಂತಿತ್ತು.

ಇದರ ಮಧ್ಯೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಪೋಸ್ಟ್ ಒಂದು ಪರೋಕ್ಷವಾಗಿ ಐಶ್ವರ್ಯಾ – ಅಭಿಷೇಕ್ ನಡುವಿನ ಬಿರುಕನ್ನು ಬಿಂಬಿಸುವಂತಿತ್ತು. ಇದೆಲ್ಲದರ ನಡುವೆಯೂ ಐಶ್ವರ್ಯಾ ರೈ ಪತಿ ಜೊತೆಗೆ ಎಲ್ಲಿಯೂ ಕಾಣಿಸಿಕೊಂಡರಲಿಲ್ಲ. ಅಲ್ಲದೆ ತಮ್ಮ ಪುತ್ರಿ ಜೊತೆ ಹಲವು ಸಮಾರಂಭಗಳಿಗೆ ಪ್ರತ್ಯೇಕವಾಗಿ ತೆರಳಿದ್ದ ವಿಡಿಯೋಗಳು ಸಹ ಹರಿದಾಡಿದ್ದವು.

ಇದೀಗ ಐಶ್ವರ್ಯಾ ರೈ ತನ್ನ ಪತಿ ಮೇಲೆ ಮುನಿಸಿಕೊಂಡಿದ್ದ ಹಳೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಪ್ರೊ ಕಬಡ್ಡಿ ಪಂದ್ಯಾವಳಿ ಸಂದರ್ಭದಲ್ಲಿ ನಡೆದ ಘಟನೆ ಇದಾಗಿದ್ದು, ಅಭಿಷೇಕ್ ಸಹೋದರಿ ಶ್ವೇತಾ ಪುತ್ರಿ ನವ್ಯಾ ಮೇಲೆ ಐಶ್ವರ್ಯಾ ಸಿಟ್ಟು ಮಾಡಿಕೊಂಡಿದ್ದ ಸಂದರ್ಭದಲ್ಲಿ ಅಭಿಷೇಕ್ ಸಮಜಾಯಿಷಿ ಕೊಡಲು ಯತ್ನಿಸಿದ್ದಾರೆ. ಆದರೆ ಇದನ್ನು ಲೆಕ್ಕಿಸದ ಐಶ್ವರ್ಯಾ ಸಾರ್ವಜನಿಕವಾಗಿಯೇ ಪತಿ ಮೇಲೆ ಮುನಿಸಿಕೊಂಡಿದ್ದಾರೆ. ಈ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular