HomeAutoದೀಪಾವಳಿಗೂ ಮೊದಲೇ ಭರ್ಜರಿ ಆಫರ್‌; ಹೀರೋ ಬೈಕ್‌ - ಸ್ಕೂಟರ್‌ಗಳ ಮೇಲೆ ಭಾರೀ ʼರಿಯಾಯಿತಿʼ

ದೀಪಾವಳಿಗೂ ಮೊದಲೇ ಭರ್ಜರಿ ಆಫರ್‌; ಹೀರೋ ಬೈಕ್‌ – ಸ್ಕೂಟರ್‌ಗಳ ಮೇಲೆ ಭಾರೀ ʼರಿಯಾಯಿತಿʼ

Hero Bikes Price in India 2023 - 10 Best New Hero Models List

 

ದೀಪಾವಳಿಗೂ ಮೊದಲೇ ಬಂಪರ್‌ ಡಿಸ್ಕೌಂಟ್‌ ಆಫರ್‌ಗಳು ಶುರುವಾಗಿವೆ. ಹೀರೋ ಮೋಟೋಕಾರ್ಪ್ ಕಂಪನಿಯ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಮೇಲೆ ಭರ್ಜರಿ ರಿಯಾಯಿತಿ ಕೊಡುಗೆಗಳಿವೆ. ಗ್ರಾಹಕರು ದೀಪಾವಳಿಗೂ ಮೊದಲೇ ಇವುಗಳ ಲಾಭ ಪಡೆಯಬಹುದು. ಹಬ್ಬ ಹರಿದಿನಗಳಲ್ಲಿ ಮಾರಾಟವನ್ನು ಉತ್ತೇಜಿಸುವುದು ಈ ಆಫರ್‌ಗಳ ಉದ್ದೇಶ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀರೋ ಸ್ಪ್ಲೆಂಡರ್ ಪ್ಲಸ್

ಹೀರೋ ಸ್ಪ್ಲೆಂಡರ್ ಪ್ಲಸ್ ಖರೀದಿಸಲು ಇಚ್ಛಿಸುವ ಗ್ರಾಹಕರಿಗೆ ಭಾರೀ ಉಳಿತಾಯ ಮಾಡುವ ಅವಕಾಶವಿದೆ. EMIನಲ್ಲಿ ಈ ಬೈಕ್ ಖರೀದಿಸಿದರೆ 5000 ರೂಪಾಯಿ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಇದಲ್ಲದೇ 5000 ರೂಪಾಯಿಗಳ ಹೀರೋ ಗೋಲ್ಡ್ ಲೈಫ್ ಲಾಭ ಕೂಡ ಲಭ್ಯವಿದೆ. ನಂತರ 1999 ರೂಪಾಯಿಗಳ ಲೋಯರ್ ಡೌನ್ ಪೇಮೆಂಟ್‌ನೊಂದಿಗೆ ಈ ಬೈಕನ್ನು ಮನೆಗೆ ಕೊಂಡೊಯ್ಯಬಹುದು. ಅಷ್ಟೇ ಅಲ್ಲ, ಆಯ್ದ ಬ್ಯಾಂಕ್‌ಗಳಲ್ಲಿ ಬೈಕ್‌ ಖರೀದಿಗೆ ಶೇ.5.99 ಬಡ್ಡಿದರದಲ್ಲಿ ಸಾಲವೂ ಲಭ್ಯವಿದೆ.

ಹೀರೋ ಎಕ್ಸ್‌ಟ್ರೀಮ್ 125ಆರ್

Hero XTREME 125R ಖರೀದಿಯಲ್ಲೂ ಉತ್ತಮ ಉಳಿತಾಯ  ಮಾಡಬಹುದು. ಈ ಬೈಕ್ ಅನ್ನು EMI ನಲ್ಲಿ ಖರೀದಿಸಿದರೆ 5000 ರೂಪಾಯಿ ಕ್ಯಾಶ್‌ಬ್ಯಾಕ್‌ ಸಿಗುತ್ತದೆ. ನಂತರ 1999 ರೂಪಾಯಿ LDP ಮೂಲಕ ಈ ಬೈಕನ್ನು ಮನೆಗೆ ಕೊಂಡೊಯ್ಯಬಹುದು. ಆಯ್ದ ಬ್ಯಾಂಕ್‌ಗಳಲ್ಲಿ ಬೈಕ್‌ ಖರೀದಿಗೆ ಶೇ.5.99 ಬಡ್ಡಿದರದಲ್ಲಿ ಸಾಲವೂ ಲಭ್ಯವಿದೆ.

ಹೀರೋ ಡೆಸ್ಟಿನಿ 125 XTEC

ಸ್ಕೂಟರ್‌ಗಳ ಮೇಲೆ ಕೂಡ ದೀಪಾವಳಿ ಆಫರ್‌ಗಳು ಲಭ್ಯವಿವೆ. Hero DESTINI 125 XTEC ಸ್ಕೂಟರ್ ಖರೀದಿ ಮೇಲೆ EMI ಕೊಡುಗೆಯಿದೆ. ಸ್ಕೂಟರ್ ಅನ್ನು ಖರೀದಿಸಿದಾಗ ಗ್ರಾಹಕರು 5000 ರೂಪಾಯಿ ಕ್ಯಾಶ್‌ಬ್ಯಾಕ್‌ ಪಡೆಯುತ್ತಾರೆ. ಇದಲ್ಲದೇ 12,000 ರೂಪಾಯಿಗಳ ವಿಶೇಷ ಪ್ರಯೋಜನವನ್ನು ನೀಡಲಾಗುತ್ತಿದೆ. ನಂತರ 8,999 ರೂಪಾಯಿ ಲೋಯರ್ ಡೌನ್ ಪೇಮೆಂಟ್‌ನೊಂದಿಗೆ ಈ ಬೈಕನ್ನು ಮನೆಗೆ ಕೊಂಡೊಯ್ಯಬಹುದು. ಬೈಕ್‌ ಖರೀದಿಗೆ ಆಯ್ದ ಬ್ಯಾಂಕ್‌ಗಳಲ್ಲಿ ನೀಡಲಾಗುವ ಶೂನ್ಯ ಬಡ್ಡಿದರದಲ್ಲಿ ಲೋನ್‌ ಪಡೆಯಬಹುದು.

For Latest News Updates, Join Our Whatsapp Community🚩
RELATED ARTICLES

Most Popular