alex Certify ಹಣದ ಸಮೇತ ಬಲೆಗೆ ಬಿದ್ದ ಸಬ್ಸಿಡಿ ಸಾಲ ನೀಡಲು ಲಂಚ ಪಡೆಯುತ್ತಿದ್ದ ನೌಕರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣದ ಸಮೇತ ಬಲೆಗೆ ಬಿದ್ದ ಸಬ್ಸಿಡಿ ಸಾಲ ನೀಡಲು ಲಂಚ ಪಡೆಯುತ್ತಿದ್ದ ನೌಕರ

ಚಿಕ್ಕಮಗಳೂರು: ಸಬ್ಸಿಡಿ ನೇರ ಸಾಲದ ಸೌಲಭ್ಯ ನೀಡಲು ಅರ್ಜಿದಾರನಿಂದ 10,000 ರೂ. ಲಂಚ ಪಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಹಣದ ಸಮೇತ ಬಂಧಿಸಿದ್ದಾರೆ.

ಕಾಂತರಾಜ್ ಬಂಧಿತ ನೌಕರ. ಮೂಡಿಗೆರೆ ತಾಲ್ಲೂಕು ಆಟೋ ಚಾಲಕ ಶ್ರೀಧರ್ ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯುವ ನೇರ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದು, ಸೌಲಭ್ಯ ನೀಡಲು ಕಾಂತರಾಜ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅರ್ಜಿದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಶುಕ್ರವಾರ ಕಚೇರಿಯಲ್ಲಿ ಲಂಚದ ಹಣ 10 ಸಾವಿರ ರೂ. ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕಾಂತರಾಜನನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಕೆ.ಜೆ. ತಿರುಮಲೇಶ್ ಇನ್ಸ್ಪೆಕ್ಟರ್ ಅನಿಲ್ ರಾಥೋಡ್, ಸಿಬ್ಬಂದಿ ವಿಜಯ ಭಾಸ್ಕರ್, ಸಂಜಯ್, ವೇದಾವತಿ, ಮಹೇಶ್, ಚಂದ್ರ ಶೆಟ್ಟಿ ಭಾಗವಹಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...