ಎನ್ ಶಂಕರ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ರೋಬೋಟ್’ 2010 ಅಕ್ಟೋಬರ್ ಒಂದರಂದು ವಿಶ್ವಾದ್ಯಂತ ತೆರೆಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿದ್ದ ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 14 ವರ್ಷಗಳಾಗಿದ್ದು, ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ಚಿತ್ರವನ್ನು ಕಲಾನಿತಿ ಮಾರನ್ ನಿರ್ಮಾಣ ಮಾಡಿದ್ದು, ರಜನಿಕಾಂತ್ ಹಾಗೂ ಐಶ್ವರ್ಯ ರೈ ಸೇರಿದಂತೆ ಸಂತಾನಂ, ಡ್ಯಾನಿ ಡೆನ್ಜಾಂಗ್ಪಾ, ಕೊಚ್ಚಿನ್ ಹನೀಫಾ, ಕಲಾಭವನ ಮಣಿ, ದೆಹಲಿ ಕುಮಾರ್, ದೇವದರ್ಶಿನಿ, ರೇವತಿ ಶಂಕರನ್, ಸಾಬು ಸಿರಿಲ್, ಶ್ರಿಯಾ ಶರ್ಮಾ, ಬಣ್ಣ ಹಚ್ಚಿದ್ದಾರೆ. ಎಆರ್ ರೆಹಮಾನ್ ಸಂಗೀತ ಸಂಯೋಜನೆ ನೀಡಿದ್ದು, ಆಂಟನಿ ಸಂಕಲನ, ಸುಜಾತಾ ಸಂಭಾಷಣೆ ಹಾಗೂ ಆರ್.ರತ್ನವೇಲು ಅವರ ಛಾಯಾಗ್ರಹಣವಿದೆ.