HomeKarnatakaಸರಗಳ್ಳರನ್ನು ಚೇಸ್ ಮಾಡುವಾಗ ಪೊಲೀಸರ ಕಾರು ಅಪಘಾತ: ಮೂವರು ಪೊಲೀಸರಿಗೆ ಗಂಭೀರ ಗಾಯ

ಸರಗಳ್ಳರನ್ನು ಚೇಸ್ ಮಾಡುವಾಗ ಪೊಲೀಸರ ಕಾರು ಅಪಘಾತ: ಮೂವರು ಪೊಲೀಸರಿಗೆ ಗಂಭೀರ ಗಾಯ

ತುಮಕೂರು: ಸರಗಳ್ಳರನ್ನು ಚೇಸ್ ಮಾಡುವಾಗ ಪೊಲೀಸರಿದ್ದ ಕಾರು ಅಪಘಾತಕ್ಕೀಡಾಗಿ, ಮೂವರು ಪೊಲೀಸರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ.

ಮಧುಗಿರಿ ಪಟ್ಟಣದಲ್ಲಿ ಮಹಿಳೆಯ 70 ಗ್ರಾಮ್ ಚಿನ್ನದ ಸರ ಕದ್ದು ಆರೋಪಿ ಎಸ್ಕೇಪ್ ಆಗುತ್ತಿದ್ದ. ಸಂತ್ರಸ್ತ ಮಹಿಳೆ ತಕ್ಷಣ ಮಧುಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಾಚಾರಣೆಗೆ ಮುಂದಾದ ಪೊಲೀಸರು ಕಾರಿನಲ್ಲಿ ಆರೋಪಿಯನ್ನು ಚೇಸ್ ಮಾಡಿದ್ದರು.

ಸರಗಳ್ಳನನ್ನು ಚೇಸ್ ಮಾಡುತ್ತಿದ್ದ ವೇಳೆ ಕಾರಿನ ಸ್ಟೇರಿಂಗ್ ಲಾಕ್ ಆಗಿ, ಕಾರು ಪಲ್ಟಿಯಾಗಿ ಬಿದ್ದಿದೆ. ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಅಪರಾಧ ವಿಭಾಗದ ಸಿಬ್ಬಂದಿ ಪ್ರಕಾಶ್, ಮುದ್ದರಾಜು, ರಮೇಶ್ ಗಾಯಾಳುಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಆಂಧ್ರಪ್ರದೇಶದ ಧರ್ಮಾವರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular