ರಾಮ್ ಪೋತಿನೇನಿ ನಟನೆಯ ‘ಸ್ಕಂದ’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ 28-09-2024 12:29PM IST / No Comments / Posted In: Featured News, Live News, Entertainment ಕಳೆದ ವರ್ಷ ಬಿಡುಗಡೆಯಾಗಿದ್ದ ರಾಮ್ ಪೋತಿನೇನಿ ಅಭಿನಯದ ‘ಸ್ಕಂದ’ ಚಿತ್ರಕ್ಕೆ ಅಂದುಕೊಂಡಂತೆ ಯಶಸ್ಸು ಸಿಗದೇ ಹೋದರು ತನ್ನ ಹಾಡುಗಳಿಂದ ಎಲ್ಲರ ಗಮನ ಸೆಳೆದಿತ್ತು, ಸೆಪ್ಟೆಂಬರ್ 28ರಂದು ಬಿಡುಗಡೆಯಾಗಿದ್ದ, ಬೋಯಪಾಟಿ ಶ್ರೀನು ನಿರ್ದೇಶನದ ಈ ಚಿತ್ರ ಒಂದು ವರ್ಷಗಳನ್ನು ಪೂರೈಸಿದ್ದು, ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ಚಿತ್ರದಲ್ಲಿ ರಾಮ್ ಪೋತಿನೇನಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಶ್ರೀ ಲೀಲಾ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸಾಯಿ ಮಂಜ್ರೇಕರ್ , ಶ್ರೀಕಾಂತ್, ಶರತ್ ಲೋಹಿತಾಶ್ವ, ಅಜಯ್ ಪುರ್ಕರ್, ಪ್ರಭಾಕರ್, ಗೌತಮಿ, ಇಂದ್ರಜಾ, ನಿತ್ಯಾ ದಾಸ್, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಎಸ್. ಥಮನ್ ಸಂಗೀತ ಸಂಯೋಜನೆ ನೀಡಿದ್ದು, ತಮ್ಮಿರಾಜು ಸಂಕಲನ, ಹಾಗೂ ಸಂತೋಷ್ ಡಿಟಾಕೆ ಛಾಯಾಗ್ರಹಣವಿದೆ. ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಹಾಗೂ ಜಿ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಶ್ರೀನಿವಾಸ ಚಿತ್ತೂರಿ, ಪವನ್ ಕುಮಾರ್ ನಿರ್ಮಾಣ ಮಾಡಿದ್ದಾರೆ.