ತಿರುವನಂತಪುರಂ : ಮಲಯಾಳಂ ನಟ ಸಿದ್ದಿಕಿ ವಿರುದ್ಧ ಕೇರಳ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನಟ ರಾಜ್ಯದಿಂದ ಪಲಾಯನ ಮಾಡಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಕೇರಳದ ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ.ಸಿದ್ದೀಕ್ ಅವರ ಭಾವಚಿತ್ರದೊಂದಿಗೆ ನೋಟಿಸ್ ಅನ್ನು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರದರ್ಶಿಸಲು ಸೂಚನೆ ನೀಡಲಾಗಿದೆ.
ಕೇರಳ ಹೈಕೋರ್ಟ್ ಮಂಗಳವಾರ ಅವರ ಮನವಿಯನ್ನು ವಜಾಗೊಳಿಸಿದಾಗಿನಿಂದ, ನಟನ ಫೋನ್ ಸ್ವಿಚ್ ಆಫ್ ಆಗಿತ್ತು ಮತ್ತು ಎರ್ನಾಕುಲಂನ ಅಲುವಾದಲ್ಲಿರುವ ಅವರ ಮನೆಯಿಂದ ಅವರು ನಾಪತ್ತೆಯಾಗಿದ್ದರು. ಈ ಆರೋಪಗಳ ನಂತರ, ಸಿದ್ದೀಕ್ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಎಎಂಎಂಎ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.