ಬಾಂಗ್ಲಾದಲ್ಲಿ ಮೃತಪಟ್ಟ ತಂದೆ, ಭಾರತದಲ್ಲಿದ್ದ ಹೆಣ್ಣುಮಕ್ಕಳು; ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ BSF

ಬಾಂಗ್ಲಾದೇಶದಲ್ಲಿ ಸಾವನ್ನಪ್ಪಿದ ತನ್ನ ತಂದೆಯ ಅಂತಿಮ ದರ್ಶನ ಪಡೆಯಲು ಹಾತೊರೆಯುತ್ತಿದ್ದ ಭಾರತದಲ್ಲಿ ವಾಸವಿದ್ದ ಮೃತನ ಇಬ್ಬರು ಹೆಣ್ಣುಮಕ್ಕಳಿಗೆ ಬಿಎಸ್ಎಫ್ ನೆರವು ನೀಡಿ ಮಾನವೀಯತೆ ಮೆರೆದಿದೆ. ಝೀರೋ ಲೈನ್‌ನಲ್ಲಿ ಮೃತ ತಂದೆಯ ಕೊನೆಯ ದರ್ಶನಕ್ಕಾಗಿ ಹೆಣ್ಣುಮಕ್ಕಳಿಗೆ ಅವಕಾಶ ಮಾಡಿಕೊಡಲಾಗಿದೆ.

ಸೆಪ್ಟೆಂಬರ್ 24 ರಲ್ಲಿ ಮಾಲ್ಡಾ ಜಿಲ್ಲೆಯಲ್ಲಿ ಸೌತ್ ಬೆಂಗಾಲ್ ಫ್ರಾಂಟಿಯರ್ ಅಂತರಾಷ್ಟ್ರೀಯ ಗಡಿಗಳ ಪಾವಿತ್ರ್ಯತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ಬದ್ಧತೆಯ ಜೊತೆಗೆ ಭಾರತದಲ್ಲಿ ವಾಸಿಸುವ ಪುತ್ರಿಯರಿಂದ ಮೃತ ಬಾಂಗ್ಲಾದೇಶದ ತಂದೆಗೆ ಕೊನೆಯ ವಿದಾಯ ಹೇಳುವ ಕಾರ್ಯವನ್ನು ಸುಗಮಗೊಳಿಸುವ ಮೂಲಕ ಮಾನವೀಯತೆ ಮೆರೆದ ಅಪರೂಪದ ಉದಾಹರಣೆಯಾಗಿದೆ. ಈ ಹೃದಯಸ್ಪರ್ಶಿ ಉಪಕ್ರಮವು ದಕ್ಷಿಣ ಬಂಗಾಳದ ಗಡಿಭಾಗದಲ್ಲಿರುವ ಬಿಎಸ್‌ಎಫ್‌ನ 12 ನೇ ಬೆಟಾಲಿಯನ್, ಬಾರ್ಡರ್ ಔಟ್‌ಪೋಸ್ಟ್ ಅಲಿಪುರ್ ಪ್ರದೇಶದಲ್ಲಿ ನಡೆಯಿತು.

ಬಾಂಗ್ಲಾದೇಶದ ಚಪೈನವಾಬ್‌ಗಂಜ್ ಜಿಲ್ಲೆಯ ಚಮುಸಾ ಗ್ರಾಮದ ನಿವಾಸಿ ಮೊಹ್ತಾರ್ ಅಲಿ ಅವರು 22 ಸೆಪ್ಟೆಂಬರ್ 2024 ರಾತ್ರಿ ಸಾವನ್ನಪ್ಪಿದ್ದಾರೆ ಎಂದು ಬಾಂಗ್ಲಾದೇಶದ ಬಿಜಿಬಿ, ಬಾರ್ಡರ್ ಔಟ್‌ಪೋಸ್ಟ್ ಅಲಿಪುರ್ ನ 12 ಬೆಟಾಲಿಯನ್, ಬಿಎಸ್‌ಎಫ್‌ನ ಕಮಾಂಡರ್ ಅವರಿಗೆ ತಿಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಪುತ್ರಿಯರಾದ ಅಕ್ಲಿಮಾ ಬೀಬಿ ಮತ್ತು ಜುಲೇಖಾ ಬೀಬಿ ಅವರು ಭಾರತದ ಮೊಸಲೆಂಪುರ ಮತ್ತು ಉತ್ತರ ದಿನಾಜ್‌ಪುರದ ಗಡಿ ಗ್ರಾಮಗಳಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ಮೃತ ತಂದೆಯನ್ನು ಕೊನೆಯ ಬಾರಿಗೆ ನೋಡಲು ಮತ್ತು ಗೌರವ ಸಲ್ಲಿಸಲು ಬಯಸಿದ್ದರು. ಅವರ ಮಾತುಗಳನ್ನು ಆಲಿಸಿದ ನಂತರ ಬಿಎಸ್ಎಫ್ ನ ಕಮಾಂಡರ್ ಮಾನವೀಯ ಮತ್ತು ಭಾವನಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಕ್ಷಣದ ಕ್ರಮಗಳನ್ನು ತೆಗೆದುಕೊಂಡರು.

ಮಾನವೀಯ ಅಂಶವನ್ನು ಪ್ರಮುಖವಾಗಿ ಇಟ್ಟುಕೊಂಡು, ಎರಡೂ ದೇಶಗಳ ಗಡಿ ಭದ್ರತಾ ಪಡೆಗಳು ಭಾರತದಲ್ಲಿ ವಾಸಿಸುವ ಹೆಣ್ಣುಮಕ್ಕಳಿಗೆ ಅಂತರಾಷ್ಟ್ರೀಯ ಗಡಿಯ ಸಮೀಪವಿರುವ ಝೀರೋ ಲೈನ್‌ನಲ್ಲಿ ತಮ್ಮ ಮೃತ ತಂದೆಯ ಕೊನೆಯ ದರ್ಶನ ಪಡೆಯಲು ವ್ಯವಸ್ಥೆ ಮಾಡಿದರು.

ಅಂತಿಮ ವಿದಾಯ ಸಮಯದಲ್ಲಿ ಇಡೀ ಸನ್ನಿವೇಶ ಭಾವನಾತ್ಮಕವಾಗಿ ಉಳಿಯಿತು ಮತ್ತು ಬಿಎಸ್ಎಫ್ ನ ಮಾನವೀಯ ಕ್ರಮಕ್ಕೆ ಮೃತರ ಭಾವುಕ ಹೆಣ್ಣುಮಕ್ಕಳು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ತಮ್ಮ ಮೃತ ತಂದೆಯನ್ನು ಅಂತರಾಷ್ಟ್ರೀಯ ಗಡಿಯಲ್ಲಿ ನೋಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಅವರಿಗೆ ಅಪಾರ ಧನ್ಯವಾದಗಳನ್ನು ಅರ್ಪಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read