HomeIndiaಬೈದು ಅವಮಾನ ಮಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

ಬೈದು ಅವಮಾನ ಮಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

ಬೈಕ್ ನಿಂದ ಕೆಸರು ತಾಗಿದ್ದಕ್ಕೆ ಬೈಕ್ ಸವಾರನಿಗೆ ವಿದ್ಯಾರ್ಥಿನಿ ಬೈದಿದ್ದಕ್ಕೆ ಆಕೆಗೆ ತಕ್ಕ ಪಾಠ ಕಲಿಸಲೆಂದು ಸ್ನೇಹಿತನ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಹೇಯ ಕೃತ್ಯ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.

ಕಾಲೇಜು ವಿದ್ಯಾರ್ಥಿನಿ ಸೆ.22ರಂದು ತನ್ನ ಮೊಬೈಲ್ ರಿಪೇರಿಗೆ ಕೊಡಲೆಂದು ಅಂಗಡಿಗೆ ಹೋಗುತ್ತಿದ್ದಳು. ಈ ವೇಳೆ ವೇಗವಾಗಿ ಬೈಕ್ ನಲ್ಲಿ ಬಂದ ಯುವಕ ರಸ್ತೆಯಲ್ಲಿದ್ದ ಕೆಸರಿನ ಮೇಲೆ ಬೈಕ್ ಓಡಿಸಿದ್ದಾನೆ. ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕೆಸರು ಸಿಡಿದಿದೆ. ಇದರಿಂದ ವಿದ್ಯಾರ್ಥಿನಿ ಬೈಕ್ ಸವಾರನನ್ನು ತಡೆದು ನಿಲ್ಲಿಸಿ ಬೈದಿದ್ದಳು.

ವಿದ್ಯಾರ್ಥಿನಿ ತನ್ನನ್ನು ಅವಮಾನ ಮಾಡಿದಳು. ಆಕೆಗೆ ಪಾಠ ಕಲಿಸಬೇಕು ಎಂಬ ಸೇಡಿನಲ್ಲಿ ಯುವಕ ತನ್ನ ಸ್ನೇಹಿತನ ಜೊತೆ ಸೇರಿ ವಿದ್ಯಾರ್ಥಿಯನ್ನು ಕಿಡ್ನ್ಯಾಪ್ ಮಾಡಿ ಆಕೆ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾನೆ. ಪ್ರಕರಣ ಸಂಅಬ್ಂಧ ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂಧಿತರನ್ನು ಕಿಶನ್ ಕೋಲ್, ಸಂತಲಾಲ್ ಎಂದು ಗುರುತಿಸಲಾಗಿದೆ. ಬಂಧಿತನ ವಿಚಾರಣೆ ವೇಳೆ ವಿದ್ಯಾರ್ಥಿನಿ ತನಗೆ ಬೈದಿದ್ದಕ್ಕೆ ಮುಜುಗರವಾಯಿತು. ಅದಕ್ಕೆ ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿದ್ದಾಗಿ ತಿಳಿಸಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular